ಬುಧವಾರ, ಏಪ್ರಿಲ್ 8, 2020
19 °C

ಪಿಂಚಣಿ: ಭಾಗಶಃ ಮುಂಗಡ ವಾಪಸ್ ಹೊಸ ವರ್ಷದಿಂದ ಜಾರಿ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನಿವೃತ್ತರು ಪ್ರತಿ ತಿಂಗಳೂ ಪಡೆಯುವ ಪಿಂಚಣಿಯ ಭಾಗಶಃ ಮೊತ್ತವನ್ನು ಮುಂಗಡವಾಗಿ ಒಂದೇ ಕಂತಿನಲ್ಲಿ ಪಡೆಯುವ ಹಳೆಯ ಸೌಲಭ್ಯವು ಇದೇ ಜನವರಿ 1ರಿಂದ ಮತ್ತೆ ಜಾರಿಗೆ ಬರಲಿದೆ.

ಈ ಯೋಜನೆಯಡಿ, ಪ್ರತಿ ತಿಂಗಳ ಪಿಂಚಣಿಯ ಮೂರನೇ ಒಂದರಷ್ಟು ಮೊತ್ತವನ್ನು 15 ವರ್ಷಗಳವರೆಗೆ ಕಡಿತ ಮಾಡಲಾಗುವುದು. ಹೀಗೆ ಕಡಿತ ಮಾಡಿದ ಮೊತ್ತವನ್ನು ನೌಕರರು ನಿವೃತ್ತರಾಗುವಾಗ ಒಂದೇ ಗಂಟಿನಲ್ಲಿ ನೀಡಲಾಗುವುದು. 15 ವರ್ಷಗಳ ನಂತರ ನಿವೃತ್ತರು ಪೂರ್ಣ ಪ್ರಮಾಣದ ಪಿಂಚಣಿಗೆ ಅರ್ಹರಾಗಲಿದ್ದಾರೆ.

ಉದ್ಯೋಗಿಗಳ ಪಿಂಚಣಿ ಯೋಜನೆಯಡಿ ಸರ್ಕಾರಿ ನೌಕರರಿಗೆ ಅನ್ವಯವಾಗುವ ಈ ಸೌಲಭ್ಯವನ್ನು (commutation) ಮತ್ತೆ ಜಾರಿಗೆ ತರಬೇಕೆಂಬ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆಯ (ಇಪಿಎಫ್‌ಒ) ಶಿಫಾರಸನ್ನು ಕೇಂದ್ರ ಕಾರ್ಮಿಕ ಸಚಿವಾಲಯವು ಒಪ್ಪಿಕೊಂಡಿದೆ.

ನಿವೃತ್ತಿ ನಂತರ ಪ್ರತಿ ತಿಂಗಳೂ ತಾವು ಪಡೆಯುವ ಪಿಂಚಣಿಯ ಕೆಲ ಭಾಗವನ್ನು ಒಂದೇ ಕಂತಿನಲ್ಲಿ ಪಡೆಯುವುದಕ್ಕೆ 6.3 ಲಕ್ಷ ಸರ್ಕಾರಿ ನೌಕರರು ಸಮ್ಮತಿ ನೀಡಿದ್ದಾರೆ. 2009ರಲ್ಲಿ ರದ್ದುಪಡಿಸಲಾಗಿದ್ದ ಈ ಸೌಲಭ್ಯವನ್ನು ಮತ್ತೆ ಜಾರಿಗೆ ತರಬೇಕೆಂಬ ಒತ್ತಾಯ ಕೇಳಿಬಂದಿತ್ತು. ಈ ಸಂಬಂಧ ‘ಉದ್ಯೋಗಿಗಳ ಪಿಂಚಣಿ ಯೋಜನೆ–1995’ಗೆ ತಿದ್ದುಪಡಿ ತರಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು