ಪೆಟ್ರೋಲ್‌, ಡೀಸೆಲ್‌ 50 ಪೈಸೆ ತುಟ್ಟಿ

7
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳಿಂದ ದರ ಪರಿಷ್ಕರಣೆ

ಪೆಟ್ರೋಲ್‌, ಡೀಸೆಲ್‌ 50 ಪೈಸೆ ತುಟ್ಟಿ

Published:
Updated:

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಶುಕ್ರವಾರ ಗರಿಷ್ಠ ಪ್ರಮಾಣದಲ್ಲಿ ದರ ಪರಿಷ್ಕರಣೆ ಮಾಡಿವೆ.

ಪ್ರತಿ ಲೀಟರ್‌ ಪೆಟ್ರೋಲ್ ದರವನ್ನು 48 ಪೈಸೆ, ಡೀಸೆಲ್‌ ದರವನ್ನು 47 ಪೈಸೆಗಳಷ್ಟು ಹೆಚ್ಚಿಸಿವೆ. ಪ್ರತಿ ದಿನ ದರ ಪರಿಷ್ಕರಣೆ ಜಾರಿಗೆ ತಂದ ನಂತರದ ಅತ್ಯಂತ ಗರಿಷ್ಠ ಮಟ್ಟದ ಏರಿಕೆ ಇದಾಗಿದೆ.

ಬೆಂಗಳೂರಿನಲ್ಲಿ ಗುರುವಾರದ ದರಕ್ಕೆ ಹೋಲಿಸಿದರೆ, ಶುಕ್ರವಾರ ಪೆಟ್ರೊಲ್‌ ದರ 57 ಪೈಸೆ ಮತ್ತು ಡೀಸೆಲ್‌ ದರ 60 ಪೈಸೆಯಷ್ಟು ತುಟ್ಟಿಯಾಗಿದೆ.ತೈಲ ಬಳಕೆದಾರರ ಮೇಲಿನ ಹೊರೆ ತಗ್ಗಿಸಲು ಎಕ್ಸೈಸ್ ಸುಂಕ ತಗ್ಗಿಸಲು ಸಾಧ್ಯವೇ ಇಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 2

  Angry

Comments:

0 comments

Write the first review for this !