ಪೆಟ್ರೋಲ್, ಡೀಸೆಲ್ ದರ ದಾಖಲೆ ಏರಿಕೆ

7

ಪೆಟ್ರೋಲ್, ಡೀಸೆಲ್ ದರ ದಾಖಲೆ ಏರಿಕೆ

Published:
Updated:

ನವದೆಹಲಿ: ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರುತ್ತಿರುವ ಪೆಟ್ರೋಲ್, ಡೀಸೆಲ್ ದರ ಶುಕ್ರವಾರ ದಾಖಲೆ ಮಟ್ಟ ತಲುಪಿದ್ದು, ಪೆಟ್ರೋಲ್ 48 ಪೈಸೆ, ಡೀಸೆಲ್ 55 ಪೈಸೆಯಷ್ಟು ಹೆಚ್ಚಳವಾಗಿದೆ

ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹79.99, ಒಂದು ಲೀಟರ್ ಡೀಸೆಲ್  ದರ ₹72 ಆಗಿದೆ. ಬೇರೆ ರಾಷ್ಟ್ರಗಳ ರಾಜಧಾನಿಗಳಿಗೆ ಹೋಲಿಸಿದರೆ ದೆಹಲಿಯಲ್ಲಿ ತೈಲಗಳ ದರ ತೀರ ಕಡಿಮೆ. 

ಮುಂಬೈಯಲ್ಲಿ ಒಂದು ಲೀಟರ್ ಪೆಟ್ರೋಲ್ ದರ ₹87.39, ಒಂದು ಲೀಟರ್ ಡೀಸೆಲ್  ದರ ₹76.51, ಕೊಲ್ಕತ್ತದಲ್ಲಿ ಪೆಟ್ರೋಲ್ ₹82.88, ಡೀಸೆಲ್ ₹74.92, ಚೆನ್ನೈನಲ್ಲಿ ಪೆಟ್ರೋಲ್ ₹83.14 ಡೀಸೆಲ್ ₹76.18 ಆಗಿದೆ

***
ವಾರದ ಹಿಂದೆ
ಆಗಸ್ಟ್‌ 31ರಂದು ನವದೆಹಲಿಯಲ್ಲಿ  ಲೀಟರ್ ಪೆಟ್ರೋಲ್ ದರ ₹78.52 , ಡೀಸೆಲ್‌ ದರ ₹70.2, ಮುಂಬೈಯಲ್ಲಿ  ₹85.72 ಇದ್ದ ಪೆಟ್ರೋಲ್ ಬೆಲೆ ₹85.93 ( 0.21 ಪೈಸೆ ಹೆಚ್ಚಳ ), ಡೀಸೆಲ್ ₹74.24 ರಿಂದ ₹74.54ಕ್ಕೆ (0.30 ಪೈಸೆ ಹೆಚ್ಚಳ) ಏರಿಕೆಯಾಗಿತ್ತು. 

**
ಭಾರತ್ ಬಂದ್
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಸೆ.10ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !