ಮಂಗಳವಾರ, ಜೂಲೈ 7, 2020
27 °C

ದೂರವಾಣಿ ಕದ್ದಾಲಿಕೆ: ಮುಕುಲ್ ರಾಯ್ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಕೋಲ್ಕೊತ್ತ : ತೃಣಮೂಲ ಕಾಂಗ್ರೆಸ್ ನೇತೃತ್ವದ ಸರ್ಕಾರವು ತಮ್ಮ ದೂರವಾಣಿ ಕರೆಗಳನ್ನು ಕದ್ದಾಲಿಸುತ್ತಿದೆ ಎಂದು ಬಿಜೆಪಿ ಮುಖಂಡ ಮುಕುಲ್ ರಾಯ್ ಆರೋಪಿಸಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರ ಜೊತೆ ತಾವು ನಡೆಸಿದ ದೂರವಾಣಿ ಸಂಭಾಷಣೆಗಳ ಎರಡು ಆಡಿಯೊ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ ಎಂದು ಅವರು ಹೇಳಿದ್ದಾರೆ. 

ಕದ್ದಾಲಿಕೆ ಬಗ್ಗೆ ಅವರು ಮಂಗಳವಾರ ದೆಹಲಿ ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದಾರೆ. 

ನಾಲ್ವರು ಐಪಿಎಸ್ ಅಧಿಕಾರಿಗಳ ಮೇಲೆ ಕಣ್ಣಿಡುವಂತೆ ಅಮಿತ್ ಶಾ ಮೂಲಕ ಸಿಬಿಐಗೆ ಹೇಳಿಸಿ ಎಂದು ಮುಕುಲ್ ರಾಯ್ ಹೇಳಿರುವ ಧ್ವನಿ ಒಂದರಲ್ಲಿದೆ. ಕಾಕತಾಳೀಯ ಎಂಬಂತೆ ಸಿಬಿಐ, ಈ ನಾಲ್ವರಿಗೂ ಶಾರದಾ ಹಗರಣದಲ್ಲಿ ಸಮನ್ಸ್ ಜಾರಿಗೊಳಿಸಿದೆ. 

ನರಾಡಾ ಮಾರುವೇಷದ ಕಾರ್ಯಾಚರಣೆ ನಡೆಸಿದ್ದ ಪತ್ರಕರ್ತರೊಬ್ಬರು ಡಾಕ್ಯುಮೆಂಟರಿ ಮಾಡುತ್ತಿದ್ದು, ಅದು ಟಿಎಂಸಿಯನ್ನು ಸರ್ವನಾಶ ಮಾಡಲಿದೆ ಎಂದು ರಾಯ್ ಹೇಳಿದ್ದಾರೆ ಎನ್ನಲಾದ ಮತ್ತೊಂದು ಆಡಿಯೊ ತುಣುಕು ವೈರಲ್ ಆಗಿದೆ. ಆದರೆ ಕದ್ದಾಲಿಗೆ ಬಗ್ಗೆ ಮಾಹಿತಿ ಇಲ್ಲ ಎಂದು ಎಡಿಜಿ ಅನೂಜ್ ಶರ್ಮಾ ಹೇಳಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು