ಮಂಗಳವಾರ, ಏಪ್ರಿಲ್ 13, 2021
32 °C
ಪ್ರಧಾನಿ ಕಚೇರಿಗೆ ಪತ್ರ ರವಾನೆ

ಪೋಷಕರ ಕಲಹ: ರಾಷ್ಟ್ರಪತಿಗೆ ಪತ್ರ ಬರೆದ ಬಾಲಕ

ಪಿಟಿಐ Updated:

ಅಕ್ಷರ ಗಾತ್ರ : | |

ಭಾಗಲ್ಪುರ (ಬಿಹಾರ): ಪೋಷಕರ ನಡುವಿನ ಜಗಳದಿಂದ ಬೇಸತ್ತ 15 ವರ್ಷದ ಬಾಲಕ ತನ್ನ ಜೀವನ ಕೊನೆಗಾಣಿಸಿಕೊಳ್ಳಲು ಅನುಮತಿ ಕೋರಿ ರಾಷ್ಟ್ರಪತಿಗೆ ಪತ್ರ ಬರೆದಿದ್ದಾನೆ.

ಈ ಪತ್ರ ರಾಷ್ಟ್ರಪತಿ ಕಚೇರಿಯಿಂದ ಪ್ರಧಾನಿ ಕಚೇರಿಗೆ ರವಾನೆಯಾಗಿದೆ. ಈ ಕುರಿತು ತ್ವರಿತ ವಿಚಾರಣೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ಪ್ರಧಾನಿ ಕಚೇರಿ ಭಾಗಲ್ಪುರ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಬಾಲಕನ ತಂದೆ ಜಾರ್ಖಂಡ್‌ನಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದು, ತಾಯಿ ಪಟ್ನಾದಲ್ಲಿ ಬ್ಯಾಂಕ್‌ ಸಿಬ್ಬಂದಿಯಾಗಿದ್ದಾರೆ. ಬಾಲಕ ತಂದೆ ಜತೆ ಜಾರ್ಖಂಡ್‌ನಲ್ಲಿ ವಾಸಿಸುತ್ತಿದ್ದಾನೆ. ‘ತಂದೆ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ. ಅವರಿಗೆ ನನ್ನ ತಾಯಿಯೇ ಸಮಾಜ ವಿರೋಧಿ ಶಕ್ತಿಗಳಿಂದ ಬೆದರಿಕೆ ಒಡ್ಡುತ್ತಿದ್ದಾರೆ’ ಎಂದು ಬಾಲಕ ಪತ್ರದಲ್ಲಿ ದೂರಿದ್ದಾನೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.