ಬುಧವಾರ, ನವೆಂಬರ್ 13, 2019
18 °C
ಆರೋಪಿ ಪೊಲೀಸರ ಅಮಾನತಿಗೆ ಹೈಕೋರ್ಟ್ ನಿರ್ದೇಶನ

ದೆಹಲಿ: ವಕೀಲರು, ಪೊಲೀಸರ ನಡುವೆ ಘರ್ಷಣೆ, ನ್ಯಾಯಾಂಗ ತನಿಖೆಗೆ ಆದೇಶ

Published:
Updated:

ನವದೆಹಲಿ: ದೆಹಲಿಯ ತೀಸ್ ಹಜಾರಿ ನ್ಯಾಯಾಲಯದ ಆವರಣದಲ್ಲಿ ಪೊಲೀಸರು ಹಾಗೂ ವಕೀಲರ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದೆ.

ದೆಹಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್.ಪಿ.ಗರ್ಗ್ ತನಿಖೆ ನಡೆಸಲಿದ್ದಾರೆ. ಇವರಿಗೆ ಸಿಬಿಐ, ಕೇಂದ್ರ ಗುಪ್ತಚರ ದಳದ ನಿರ್ದೇಶಕರು ಹಾಗೂ ಇತರೆ ಅಧಿಕಾರಿಗಳು ಸಹಕಾರ ನೀಡಲಿದ್ದಾರೆ.

ಆರು ವಾರಗಳ ಅವಧಿಯಲ್ಲಿ ನ್ಯಾಯಾಂಗ ತನಿಖೆ ನಡೆಸಿ ವರದಿ ನೀಡಬೇಕು ಎಂದು ಹೈಕೋರ್ಟ್ ತಿಳಿಸಿದೆ.

ವಕೀಲರು ಹಾಗೂ ಪೊಲೀಸರ ನಡುವೆ ನಡೆದ ಘರ್ಷಣೆಯಲ್ಲಿ ಆರೋಪಿತ ಪೊಲೀಸ್ ಅಧಿಕಾರಿಗಳನ್ನು ದೆಹಲಿ ಪೊಲೀಸರು ಕೂಡಲೆ ಅಮಾನತುಗೊಳಿಸಬೇಕು. ಗಾಯಗೊಂಡ ವಕೀಲ ವಿಜಯ್ ವರ್ಮಾ ಅವರಿಗೆ ₹ 50 ಸಾವಿರ ಹಾಗೂ ಗಾಯಗೊಂಡ ಇಬ್ಬರು ವಕೀಲರಿಗೆ ತಲಾ ₹15 ಸಾವಿರ ಹಾಗೂ ₹ 10 ಸಾವಿರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)