ತೈಲ ಬೆಲೆ ಏರಿಕೆಗೆ ಜಾಗತಿಕ ವಿದ್ಯಮಾನ ಕಾರಣ: ಸಚಿವ ರವಿಶಂಕರ್‌ ಪ್ರಸಾದ್‌

7

ತೈಲ ಬೆಲೆ ಏರಿಕೆಗೆ ಜಾಗತಿಕ ವಿದ್ಯಮಾನ ಕಾರಣ: ಸಚಿವ ರವಿಶಂಕರ್‌ ಪ್ರಸಾದ್‌

Published:
Updated:

ನವದೆಹಲಿ: ತೈಲ ಉತ್ಪಾದನಾ ರಾಷ್ಟ್ರಗಳು ಸರಬರಾಜು ಕಡಿತಗೊಳಿಸಿರುವುದು ಸಮಸ್ಯೆ ಉಲ್ಬಣಿಸಲು ಪ್ರಮುಖ ಕಾರಣ ಎಂದು ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮಜಾಯಿಷಿ ನೀಡಿದ್ದಾರೆ.

ವೆನೆಜುವೆಲಾದಲ್ಲಿ ಉದ್ಭವಿಸಿರುವ ರಾಜಕೀಯ ಅಸ್ಥಿರತೆ ಮತ್ತು ಇರಾನ್‌ ಮೇಲೆ ಅಮೆರಿಕದ ಆರ್ಥಿಕ ದಿಗ್ಬಂಧನದಂತಹ ಜಾಗತಿಕ ವಿದ್ಯಮಾನಗಳು ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಗ್ರಾಹಕರ ಮೇಲಿನ ಹೊರೆ ತಪ್ಪಿಸಲು ರಾಜ್ಯಗಳು ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಕೈಬಿಡಬೇಕು. ಇದು ರಾಜ್ಯಗಳ ವಿವೇಚನೆಗೆ ಬಿಟ್ಟ ವಿಚಾರ. ಕಳೆದ ವರ್ಷ ಕೇಂದ್ರ ಸರ್ಕಾರ ಅಬಕಾರಿ ಸುಂಕ ಕಡಿತಗೊಳಿಸಿತ್ತು ಎಂದು ಪ್ರಸಾದ್‌ ಹೇಳಿದರು. 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !