ತ್ರಿವಳಿ ತಲಾಖ್‌: ಜಾಮೀನು ಅವಕಾಶಕ್ಕೆ ಸಂಪುಟ ಅನುಮೋದನೆ

7

ತ್ರಿವಳಿ ತಲಾಖ್‌: ಜಾಮೀನು ಅವಕಾಶಕ್ಕೆ ಸಂಪುಟ ಅನುಮೋದನೆ

Published:
Updated:

ನವದೆಹಲಿ: ತಮ್ಮ ಪತ್ನಿಯರಿಗೆ ತ್ರಿವಳಿ ತಲಾಖ್‌ ನೀಡುವ ಅಪರಾಧಿ ಸ್ಥಾನದಲ್ಲಿರುವ ವ್ಯಕ್ತಿಗೆ ಜಾಮೀನು ಅವಕಾಶ ನೀಡುವ ಅಂಶವನ್ನು ಸೇರಿಸಿರುವ ತಿದ್ದುಪಡಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಈಗಾಗಲೇ ಕಾನೂನಿನಲ್ಲಿ ಅಡಕವಾಗಿರುವಂತೆ ತ್ರಿವಳಿ ತಲಾಖ್‌ ಕಾನೂನುಬಾಹಿರ ಮತ್ತು ಇದು ಶಿಕ್ಷಾರ್ಹ ಅಪರಾಧವಾಗಿ ಮುಂದುವರಿಯಲಿದೆ. ಪತಿಗೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದು.

ಮುಸ್ಲಿಂ ಮಹಿಳೆಯರ(ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 (ತ್ರಿವಳಿ ತಲಾಖ್ ನಿಷೇಧ ಮಸೂದೆ) ಈಚೆಗೆ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. 

ಆದರೆ, ಮಸೂದೆಯನ್ನು ವಿವರವಾಗಿ ಪರಿಶೀಲಿಸಲು ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ವಿರೋಧ ಪಕ್ಷದವರು ಆಗ್ರಹಿಸಿದ್ದರಿಂದ ರಾಜ್ಯಸಭೆಯಲ್ಲಿ ಅಂಗೀಕಾರವಾಗಿಲ್ಲ.

ತ್ರಿವಳಿ ತಲಾಖೆ ನೀಡಿದರೆ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಎಂದು ಕರಡು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಮಸೂದೆಯಲ್ಲಿ ಅಪರಾಧಿಗೆ ಜಾಮೀನು ಒದಗಿಸುವ ಅಂಶವನ್ನು ಸೇರ್ಪಡೆಗೊಳಿಸುವುದು ವಿರೋಧ ಪಕ್ಷಗಳ ಬೇಡಿಕೆಗಳಲ್ಲಿ ಒಂದಾಗಿದೆ.

ಇಂದು ಮಾಡಲಾಗಿರುವ ತಿದ್ದುಪಡಿಗಳ ಅಡಿಯಲ್ಲಿ ಜಾಮೀನು ನೀಡುವ ಅಧಿಕಾರವನ್ನು ನ್ಯಾಧೀಶರಿಗೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಉದ್ದೇಶಿತ ಕಾನೂನು ತ್ರಿವಳಿ ತಾಲಾಖ್‌ನಿಂದ ಸಂತ್ರಸ್ತರಾದ ಮಹಿಳೆಗೆ ಕಾನೂನಿನ ಬಲ ನೀಡುತ್ತದೆ ಮತ್ತು ಆ ಮಹಿಳೆ ತನಗೆ ಮತ್ತು ಮಕ್ಕಳಿಗೆ ಜೀನಾಂಶ ಕೋರಿ ನ್ಯಾಯಾಲಯದ ಮೊರೆ ಹೋಗಲು ಅನುವು ಮಾಡಿಕೊಡುತ್ತದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !