ಯುಪಿಎಗಿಂತಲೂ ಕಡಿಮೆ ಬೆಲೆಯಲ್ಲಿ ಎನ್‍ಡಿಎ ರಫೇಲ್ ಒಪ್ಪಂದ ಮಾಡಿತ್ತು: ಸಿಎಜಿ ವರದಿ

7

ಯುಪಿಎಗಿಂತಲೂ ಕಡಿಮೆ ಬೆಲೆಯಲ್ಲಿ ಎನ್‍ಡಿಎ ರಫೇಲ್ ಒಪ್ಪಂದ ಮಾಡಿತ್ತು: ಸಿಎಜಿ ವರದಿ

Published:
Updated:

ನವದೆಹಲಿ: ಫ್ರಾನ್ಸ್ ನಿರ್ಮಿತ 36 ರಫೇಲ್ ಯುದ್ಧ ವಿಮಾನಗಳನ್ನು ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಈ ಹಿಂದಿನ ಯುಪಿಎ ಸರ್ಕಾರದಲ್ಲಿ ನಡೆದ ಒಪ್ಪಂದಕ್ಕಿಂತ  ಶೇ.2.86 ಕಡಿಮೆ ಬೆಲೆಯಲ್ಲಿ ಖರೀದಿಸಿದೆ ಎಂದು ಸಿಎಜಿ ವರದಿ ಲೋಕಸಭೆ ಅಧಿವೇಶನದಲ್ಲಿ ಹೇಳಿದೆ.

ಹೊಸ ಒಪ್ಪಂದ ಮಾಡುವಾಗ ಡಸಾಲ್ಟ್ ವಿಮಾನ ಸಂಸ್ಥೆ ಬ್ಯಾಂಕ್ ಗ್ಯಾರಂಟಿಗಾಗಿ ಹಣ ಪಾವತಿ ಮಾಡಬೇಕಾಗಿ ಬಂದಿಲ್ಲ. ಹಾಗಾಗಿ 2007ರ ಯುಪಿಎ ಅವಧಿಯ ಒಪ್ಪಂದಕ್ಕೆ ಹೋಲಿಸಿದರೆ ಈಗ ಮಾಡಿರುವ ಒಪ್ಪಂದ ಲಾಭದಾಯವಾಗಿದೆ ಮತ್ತು  ಬಹುಬೇಗ ಯುದ್ಧ ವಿಮಾನಗಳು ಲಭ್ಯವಾಗುತ್ತಿವೆ ಎಂದು ಸಿಎಜಿ ವರದಿ ಹೇಳಿದೆ.

ರಫೇಲ್​ ಒಪ್ಪಂದಲ್ಲಿ  ಭಾರೀ ಅವ್ಯವಹಾರ ನಡೆದಿದೆ ಎಂದು ಕಾಂಗ್ರೆಸ್​ ಈ ಮೊದಲಿನಿಂದಲೂ ಹೇಳುತ್ತಲೇ ಬರುದೆ. ಈ ತ್ತಿವಿಚಾರವಾಗಿ ಕಾಂಗ್ರೆಸ್​ ಸುಪ್ರೀಂಕೋರ್ಟ್​​ ಮೆಟ್ಟಿಲೇರಿತ್ತು. ಆದರೆ, ಕೋರ್ಟ್​ ಮೋದಿ ಪರವಾಗಿ ತೀರ್ಪು ನೀಡಿತ್ತು. ಇದೀಗ ಸಿಎಜಿ ವರದಿಯೂ ಎನ್‍ಡಿಎ ಸರ್ಕಾರದ ಪರವಾಗಿಯೇ ಇದೆ.

ಇದನ್ನೂ  ಓದಿಸಂಸತ್ತಿನ ಹೊರಗೆ ಕಾಗದದ ವಿಮಾನ ಹಾರಿಸಿ ಕಾಂಗ್ರೆಸ್ ಸಂಸದರ ಪ್ರತಿಭಟನೆ 

ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿ, ಈ ಮೂಲಕ  ಕಾಂಗ್ರೆಸ್‍ನ ಸುಳ್ಳುಗಳು ಬಹಿರಂಗವಾಗಿದೆ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 32

  Happy
 • 2

  Amused
 • 1

  Sad
 • 0

  Frustrated
 • 8

  Angry

Comments:

0 comments

Write the first review for this !