ಗಡ್ಕರಿಯ ಕೆಚ್ಚು ಮೆಚ್ಚಿದ ರಾಹುಲ್

7

ಗಡ್ಕರಿಯ ಕೆಚ್ಚು ಮೆಚ್ಚಿದ ರಾಹುಲ್

Published:
Updated:

ನವದೆಹಲಿ: ಬಿಜೆಪಿಯಲ್ಲಿ ಕೆಚ್ಚು ಹೊಂದಿರುವ ಏಕೈಕ ವ್ಯಕ್ತಿ ಎಂದರೆ ಅದು ನಿತಿನ್ ಗಡ್ಕರಿ ಮಾತ್ರ ಎಂದು ರಾಹುಲ್ ಗಾಂಧಿ ಹೊಗಳಿದ್ದಾರೆ. ರಫೇಲ್ ಹಗರಣ, ನಿರುದ್ಯೋಗ, ರೈತರ ಸಮಸ್ಯೆ ಹಾಗೂ ಸಾಂವಿಧಾನಿಕ ಸಂಸ್ಥೆಗಳ ವಿನಾಶದ ಬಗ್ಗೆ ಗಡ್ಕರಿ ಉತ್ತರ ನೀಡಬೇಕು ಎಂದು ಅವರು ಟ್ವಿಟರ್‌ನಲ್ಲಿ ಕೇಳಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಡ್ಕರಿ, ರಾಹುಲ್ ಅವರಿಂದ ಪ್ರಮಾಣಪತ್ರ ಬೇಕಿಲ್ಲ ಎಂದಿದ್ದಾರೆ. ಮಾಧ್ಯಮಗಳ ತಿರುಚಿದ ವರದಿಯನ್ನು ಆಧರಿಸಿ ಕಾಂಗ್ರೆಸ್ ಅಧ್ಯಕ್ಷರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ನಾಗ್ಪುರದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ಗಡ್ಕರಿ, ಮೊದಲು ಮನೆಯ ಜವಾಬ್ದಾರಿಗಳನ್ನ ನಿರ್ವಹಿಸಬೇಕು ಎಂದು ಕರೆಕೊಟ್ಟಿದ್ದರು. ‘ಮನೆಯನ್ನು ನಿಭಾಯಿಸಲು ಆಗದವರು ದೇಶವನ್ನೂ ನಿಭಾಯಿಸಲಾರರು’ ಎಂದು ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !