ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆಗೆ ₹1.6 ಲಕ್ಷ ಕೋಟಿ: ರೈಲು ಪ್ರಯಾಣ ದರದಲ್ಲಿ ಹೆಚ್ಚಳ ಇಲ್ಲ

Last Updated 2 ಜುಲೈ 2019, 10:02 IST
ಅಕ್ಷರ ಗಾತ್ರ

ನವದೆಹಲಿ: ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡುಮಧ್ಯಂತರ ಬಜೆಟ್ ಮಂಡಿಸಿರುವ ಕೇಂದ್ರ ಸರ್ಕಾರ ರೈಲ್ವೆಗೆ ₹1.6 ಲಕ್ಷ ಕೋಟಿ ರೂಪಾಯಿಗಳನ್ನು ಮೀಸಲಿರಿಸಿದ್ದು ಪ್ರಯಾಣ ದರದಲ್ಲಿ ಹೆಚ್ಚಳ ಮಾಡಲಾಗಿಲ್ಲ.

ಹಂಗಾಮಿ ಹಣಕಾಸು ಸಚಿವ ಪೀಯೂಷ್ ಗೋಯಲ್ ಶುಕ್ರವಾರ ಬಜೆಟ್‌ ಮಂಡಿಸಿದರು. ರೈಲ್ವೆ ಇಲಾಖೆಯ ಇತಿಹಾಸದಲ್ಲೇ ಈ ವರ್ಷ ಅತ್ಯಂತ ಸುರಕ್ಷತಾ ವರ್ಷವಾಗಿದೆ ಎಂದು ಗೋಯಲ್ ಹೇಳಿದರು. 2014ರಿಂದ ಈಚೆಗೆ ಮೋದಿ ಸರ್ಕಾರ ರೈಲ್ವೆ ಇಲಾಖೆಗೆ ಹೆಚ್ಚಿನ ಅನುದಾನ ನೀಡಿದ್ದು ಇದು ಶೇ 148ರಷ್ಟು ಹೆಚ್ಚಳವಾಗಿದೆ.

ರೈಲ್ವೆ ಪ್ರಯಾಣಿಕ ಹಾಗೂ ಸರಕು ಸಾಗಣೆ ಬೋಗಿಗಳ ನಿರ್ಮಾಣಕ್ಕಾಗಿ ಈ ಬಜೆಟ್‌ನಲ್ಲಿ ₹6,114.82 ಕೋಟಿ ಮೀಸಲಿರಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಶೇ 64ರಷ್ಟು ಹೆಚ್ಚು ಅನುದಾನ ನೀಡಲಾಗಿದೆ.

ರೈಲ್ವೆ ಬೋಗಿಗಳನ್ನು ದೇಶೀಯವಾಗಿ ನಿರ್ಮಿಸಿ ರಫ್ತು ಮಾಡುವ ಯೋಜನೆಗೆ ಇದರಿಂದ ಹೆಚ್ಚು ಪ್ರೋತ್ಸಾಹ ದೊರಕುವ ಸಾಧ್ಯತೆ ಇದೆ. ಮೊದಲ ದೇಶಿ ನಿರ್ಮಿತ ಅತಿ ವೇಗದ ‘ಟ್ರೈನ್ 18’ (ವಂದೇ ಭಾರತ ಎಕ್ಸ್‌ಪ್ರೆಸ್) ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿರುವುದರಿಂದ, ಇನ್ನೂ ಆರು ‘ಟ್ರೈನ್‌ 18’ ರೈಲುಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ.

ರೈಲು ಪ್ರಯಾಣ ದರದಲ್ಲಿಹೆಚ್ಚಳ ಮಾಡಲಾಗಿಲ್ಲ.

ಮೇಕಿನ್ ಇಂಡಿಯಾ ಯೋಜನೆ ಅಡಿಯಲ್ಲಿ ರೈಲ್ವೆ ವಲಯದಲ್ಲಿ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ. ಈ ವಲಯದ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೆ ಹೇರಿಸಲಾಗಿದೆ ಹಾಗೂದೇಶದ ಎಲ್ಲ ರೈಲ್ವೆ ಲೆವೆಲ್ ಕ್ರಾಸಿಂಗ್‌ಗಳನ್ನು (ಕಾವಲು ರಹಿತ) ಬಂದ್ ಮಾಡಲಾಗಿದೆ.

ಕಾಮಲುರಹಿತ ಕ್ರಾಸಿಂಗ್ ಸಿಗ್ನಲ್‌ಗಳ ನಿರ್ಮಾಣ ಮಾಡಲಾಗಿದೆ. ದೇಶದಲ್ಲಿ ಶೇ 90 ಬ್ರಾಡ್‌ಗೇಜ್‌ ಹಳಿಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ ಎಂದರು.

ರೈಲ್ವೆಗೆ ಹೆಚ್ಚಿನ ಬಂಡವಾಳವನ್ನು ಆರ್ಕಷಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಈಗಾಗಲೇ ಎಲ್ಲಾ ನಿಲ್ದಾಣಗಳಿಗೆ ಸಿಸಿಕ್ಯಾಮೆರಾ ಮತ್ತು ವೈಫೈ ಅಳವಡಿಸುವ ಕಾರ್ಯ ಚಾಲ್ತಿಯಲ್ಲಿದೆ. ಟ್ರೈನ್‌18 ಅಥವಾ ವಂದೇ ಭಾರತ ಎಕ್ಸ್‌ಪ್ರೆಸ್‌ ರೈಲು ಯೋಜನೆ ಮೋದಿ ಸರ್ಕಾರದ ಸಾಧನೆಯಾಗಿದೆ. ಸಂಪೂರ್ಣ ದೇಶಿಯವಾಗಿ ನಿರ್ಮಾಣ ಮಾಡಿರುವ ಈ ರೈಲು ಹೆಚ್ಚು ವೇಗವಾಗಿ ಚಲಿಸುವುದಲ್ಲದೆ, ಸುರಕ್ಷತೆಯನ್ನು ಹೊಂದಿದೆ ಎಂದರು.

ರೈಲ್ವೆಗೆಸೇವೆ ಒದಗಿಸುವ ಖಾಸಗಿ ಕಂಪೆನಿಗಳ ಷೇರುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಎಲ್‌&ಟಿ, ಎಬಿಬಿ, ಬಿಇಎಂಎಲ್‌ ಸೇರಿದಂತೆ ಎಂಬಿಸಿಸಿ ಷೇರುಗಳ ಬೆಲೆಯಲ್ಲಿ ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT