ಮಂಗಳವಾರ, ಫೆಬ್ರವರಿ 18, 2020
16 °C

ರಾಜಸ್ಥಾನದ ಈ ‘ಕಾಂಗ್ರೆಸ್’ಗೆ ಎರಡು ಕೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Baby boy

ಜೈಪುರ: ರಾಜಸ್ಥಾನದ ಕಾಂಗ್ರೆಸ್ ಕಾರ್ಯಕರ್ತ ವಿನೋದ್ ಜೈನ್ ಎಂಬವರು ಪಕ್ಷದ ಮೇಲಿನ ಪ್ರೀತಿಯಿಂದ ಮಗನಿಗೆ ‘ಕಾಂಗ್ರೆಸ್’ ಎಂದು ನಾಮಕರಣ ಮಾಡಿದ್ದಾರೆ.

ಪಕ್ಷವನ್ನು ಅತಿಯಾಗಿ ಪ್ರೀತಿಸುವ ವಿನೋದ್, ಕುಟುಂಬದವರು ವಿರೋಧಿಸಿದರೂ ಲೆಕ್ಕಿಸದೆ ಮಗನಿಗೆ ಪಕ್ಷದ ಹೆಸರಿಟ್ಟಿದ್ದಾರೆ. ವಿಲಕ್ಷಣ ಎಂದು ಅನ್ನಿಸಿದರೂ ‍ಪರವಾಗಿಲ್ಲ, ಮಗನಿಗೆ ಪಕ್ಷದ ಹೆಸರೇ ಸೂಕ್ತ ಎಂದಿದ್ದಾರೆ.

ಮಗುವಿನ ಜನನ ಪ್ರಮಾಣಪತ್ರದಲ್ಲಿಯೂ ‘ಕಾಂಗ್ರೆಸ್‌ ಜೈನ್’ ಎಂದೇ ಉಲ್ಲೇಖಿಸಲಾಗಿದೆ. ಮಗನೂ ತನ್ನಂತೆಯೇ ಪಕ್ಷಕ್ಕೆ ನಿಷ್ಠನಾಗಿರಬೇಕು ಎಂಬುದು ವಿನೋದ್ ಬಯಕೆ.

‘ನನ್ನ ಮಗನೂ ಮುಂದೆ ಪಕ್ಷದಲ್ಲಿ ಸಕ್ರಿಯ ಪಾತ್ರವಹಿಸುವ ಭರವಸೆಯೊಂದಿಗೆ ಈ ಹೆಸರಿಟ್ಟಿದ್ದೇನೆ’ ಎಂದು ವಿನೋದ್ ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು