ಸರ್ವರಿಗೂ ಅಭಿನಂದನೆ, ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸುವೆ: ಸಿಂಗ್

7

ಸರ್ವರಿಗೂ ಅಭಿನಂದನೆ, ನಿಷ್ಪಕ್ಷವಾಗಿ ಕಾರ್ಯ ನಿರ್ವಹಿಸುವೆ: ಸಿಂಗ್

Published:
Updated:

ನವದೆಹಲಿ: ರಾಜ್ಯಸಭೆ ಉಪ ಸಭಾಪತಿಯಾಗಿ ನನ್ನನ್ನು ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಹೃದಯ ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹರಿವಂಶ್‌ ನಾರಾಯಣ ಸಿಂಗ್‌ ಹೇಳಿದರು.

ಸದನದಲ್ಲಿ ತಮ್ಮ ಆಯ್ಕೆ ಬಳಿಕ ಸಭಾಧ್ಯಕ್ಷರೂ ಹಾಗೂ ಉಪ ರಾಷ್ಟ್ರಪತಿಯೂ ಆಗಿರುವ ಎಂ. ವೆಂಕಯ್ಯ ನಾಯ್ಡು ಅವರ ಭಾಷಣದ ಬಳಿಕ ಅವರು ಅಭಿನಂದನಾ ನುಡಿಗಳನ್ನಾಡಿದರು.

ನಮ್ಮ ಪರ ಮತ ನೀಡಿದವರು ಹಾಗೂ ಸದನದ ಪ್ರತಿಯೊಬ್ಬ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಪಕ್ಷ ನಾಯಕರಿಗೂ ಅಭಿನಂದನೆಗಳು ಎಂದರು.

ಶಂಕರಾಚಾರ್ಯರು, ಭಗವದ್ಗೀತೆ ವಿಷಯಗಳನ್ನು ಉಲ್ಲೇಖಿಸಿದ ಅವರು, ದೇಶದ ಅಭಿವೃದ್ಧಿಗೆ ನಮ್ಮ ನಡೆ ಹೇಗಿರಬೇಕು ಎಂಬ ವಿಚಾರವನ್ನು ಮಂದಿಟ್ಟರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಸ್ಮರಿಸಿದ ಅವರು, ಗಾಂಧೀಜಿ ಅವರ ಆಶಯದಂತೆ ನಡೆಯಬೇಕು ಎಂದರು.

ಈ ಅವಕಾಶ ನೀಡಿರುವ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ. ಸದನದಲ್ಲಿ ಹಿರಿಯರು, ಸಾಕಷ್ಟು ಅನುಭವಿಗಳಿದ್ದೀರಿ. ಎಲ್ಲರೂ ನಮಗೆ ಸಹಕಾರ ನೀಡಿ. ನಿಷ್ಪಕ್ಷ ಮತ್ತು ಗೌರವಯುತವಾಗಿ ಸದನದಲ್ಲಿ ಕಾರ್ಯನಿರ್ವಹಿಸುವೆ ಎಂದು ಹೇಳಿದರು.

* ಇದನ್ನೂ ಓದಿ...

ರಾಜ್ಯಸಭೆ ಉಪ ಸಭಾಪತಿಯಾಗಿ ಹರಿವಂಶ ನಾರಾಯಣ ಸಿಂಗ್‌ ಆಯ್ಕೆ
245 ಸದಸ್ಯ ಬಲದ ರಾಜ್ಯಸಭೆಯಲ್ಲಿ ಒಟ್ಟು 230 ಮತಗಳು ಚಲಾವಣೆಯಾದವು. ಈ ಮತಗಳ ಪೈಕಿ ಎನ್‌ಡಿಎ ಅಭ್ಯರ್ಥಿ, ಜೆಡಿಯು ಸಂಸದ ಹರಿವಂಶ ನಾರಾಯಣ ಸಿಂಗ್‌ ಅವರು 125 ಮತ ಪಡೆದು ಗೆಲುವು ಸಾಧಿಸಿದರು. ವಿರುದ್ಧವಾಗಿ(ಬಿ.ಕೆ.ಹರಿಪ್ರಸಾಸ್‌ ಪರ) 105 ಮತ ಬಿದ್ದವು. ಇಬ್ಬರು ಸದಸ್ಯರು ಗೈರಾಗಿದ್ದರು.
ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ಆಯ್ಕೆಯನ್ನು ಪ್ರಕಟಿಸಿದರು.
 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !