ರೈಲು ಪ್ರಯಾಣಿಕರಿಗೆ ಗುರುತುಪತ್ರವಾಗಿ ಡಿಜಿಟಲ್‌ ಆಧಾರ್‌, ಚಾಲನಾ ಪರವಾನಗಿ

7

ರೈಲು ಪ್ರಯಾಣಿಕರಿಗೆ ಗುರುತುಪತ್ರವಾಗಿ ಡಿಜಿಟಲ್‌ ಆಧಾರ್‌, ಚಾಲನಾ ಪರವಾನಗಿ

Published:
Updated:

ನವದೆಹಲಿ: ರೈಲು ಪ್ರಯಾಣಕ್ಕೆ ಮುಂಗಡ ಕಾದಿರಿಸಿ ಪ್ರಯಾಣಿಸುವವರು ಸರ್ಕಾರದ ಡಿಜಿ ಲಾಕರ್‌ನಲ್ಲಿರುವ ಆಧಾರ್‌ ಕಾರ್ಡ್‌ ಮತ್ತು ಚಾಲನಾ ಪರವಾನಗಿ ಚೀಟಿಯನ್ನು ಗುರುತಿನ ಚೀಟಿಯಾಗಿ (ಸಾಫ್ಟ್ ಕಾಪಿ) ತೋರಿಸಬಹುದು. ಡಿಜಿ ಲಾಕರ್ ಅನ್ನು ಸರ್ಕಾರ ನಿರ್ವಹಿಸುತ್ತಿದ್ದು, ಕೆಲವು ಅಧಿಕೃತ ದಾಖಲೆಗಳನ್ನು ಇದರಲ್ಲಿ ಸಂಗ್ರಹಿಸಿ ಇಡಬಹುದಾಗಿದೆ.

ಈ ಸಂಬಂಧ ರೈಲ್ವೆಯ ಎಲ್ಲಾ ವಿಭಾಗೀಯ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಪತ್ರ ರವಾನಿಸಲಾಗಿದೆ.

‘ಯಾವುದೇ ಪ್ರಯಾಣಿಕರು ತಮ್ಮ ಡಿಜಿ ಲಾಕರ್‌ಗೆ ಲಾಗಿನ ಆಗಿ ಆಧಾರ್ ಕಾರ್ಡ್‌ ಮತ್ತು ಚಾಲನಾ ಪರವಾನಗಿಯ ಸಾಫ್ಟ್‌ ಕಾಪಿಯನ್ನು ತೋರಿಸಿದರೆ ಅದನ್ನು ಅಧಿಕೃತ ಗುರುತು ಪತ್ರ ಎಂದು ಪರಿಗಣಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಯಾಣಿಕರು ತಾವೇ ಅಪ್‌ಲೋಡ್‌ ಮಾಡಿದ ದಾಖಲೆಗಳು ‘ಅಪ್‌ಲೋಡೆಡ್‌’ ವಿಭಾಗದಲ್ಲಿ ಇದ್ದರೆ ಅವುಗಳನ್ನು ಅಧಿಕೃತ ಗುರುತಿನ ಪತ್ರಗಳು ಎಂದು ಪರಿಗಣಿಸಲಾಗುವುದಿಲ್ಲ.

ನರೇಂದ್ರ ಮೋದಿ ಅವರ ‘ಡಿಜಿಟಲ್‌ ಇಂಡಿಯಾ’ಯ ಭಾಗವಾಗಿ ಡಿಜಿ ಲಾಕರ್ ಸೌಲಭ್ಯ ಆರಂಭಿಸಲಾಗಿದೆ. ಸದ್ಯ ಇದರಲ್ಲಿ ಚಾಲನಾ ಪರವಾನಗಿ ಮತ್ತು ಆಧಾರ್ ಅನ್ನು ಸಂಗ್ರಹಿಸಿ ಇಡಬಹುದಾಗಿದೆ.

 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !