ವಂಚನೆ ಪ್ರಕರಣ: ಪ್ರಿಯಾಂಕಾ ಗಾಂಧಿ ಪತಿ ವಾದ್ರಾಗೆ ಮಧ್ಯಂತರ ಜಾಮೀನು

7

ವಂಚನೆ ಪ್ರಕರಣ: ಪ್ರಿಯಾಂಕಾ ಗಾಂಧಿ ಪತಿ ವಾದ್ರಾಗೆ ಮಧ್ಯಂತರ ಜಾಮೀನು

Published:
Updated:
Prajavani

ನವದೆಹಲಿ: ಹಣ ವಂಚನೆ ಪ್ರಕರಣದ ಆರೋಪಿಯಾಗಿರುವ ರಾಬರ್ಟ್‌ ವಾದ್ರಾ ಅವರಿಗೆ ದೆಹಲಿ ಕೋರ್ಟ್‌ ಶನಿವಾರ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ಆದರೆ, ಜಾರಿ ನಿರ್ದೇಶನಾಲಯಕ್ಕೆ ಹಾಜರಾಗಿ ತನಿಖೆಗೆ ಸಹಕಾರ ನೀಡುವಂತೆ ಅದು ಸೂಚಿಸಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರ ಪತಿಯಾಗಿರುವ ವಾದ್ರಾ, ಶುಕ್ರವಾರ ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದರು. ಲಂಡನ್‌ನಲ್ಲಿ ₹17.44 ಕೋಟಿ (19 ಮಿಲಿಯನ್‌ ಪೌಂಡ್‌) ಮೊತ್ತದ ಆಸ್ತಿ ಖರೀದಿಗೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಪ್ರಕರಣದಲ್ಲಿ ವಾದ್ರಾ ಆರೋಪಿಯಾಗಿದ್ದಾರೆ. ಈ ಆಸ್ತಿಯ ನಿಜವಾದ ಒಡೆಯರು ವಾದ್ರಾ ಎಂಬ ಆರೋಪವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !