ನವದೆಹಲಿ: ಅಂತರರಾಷ್ಟ್ರೀಯ ಮಟ್ಟದ ಮಾದಕವಸ್ತು ಜಾಲವನ್ನು ಭೇದಿಸಿರುವಮಾದಕವಸ್ತು ನಿಗ್ರಹ ಘಟಕ (ಎನ್‌ಸಿಬಿ) ಒಂಬತ್ತು ಮಂದಿಯನ್ನು ಬಂಧಿಸಿದೆ. ಅಲ್ಲದೆ ₹1,300 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.

20 ಕೆ.ಜಿ ಕೊಕೇನ್ ಅನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ. ದೇಶದಲ್ಲಿ ಇದುವರೆಗೆ ಇಷ್ಟು ತೂಕದ ಕೊಕೇನ್ ಅನ್ನು ಪಡಿಸಿಕೊಂಡಿರಲಿಲ್ಲ. ಇದರ ಮಾರಾಟ ಜಾಲ ದೆಹಲಿ, ಎನ್‌ಸಿಆರ್, ಪಂಜಾಬ್, ಉತ್ತರಾಖಂಡ, ಮಹಾರಾಷ್ಟ್ರದವರೆಗೂ ಹಬ್ಬಿತ್ತು. ಆರೋಪಿಗಳಿಗೆ ಆಸ್ಟ್ರೇಲಿಯಾ, ಕೆನಡಾ, ಅಮೆರಿಕ, ಇಂಡೊನೇಷ್ಯಾ, ಶ್ರೀಲಂಕಾ, ಕೊಲಂಬಿಯಾ, ಮಲೇಷ್ಯಾ ಮತ್ತು ನೈಜೀರಿಯಾದ ಸಂಪರ್ಕವೂ ಇತ್ತು.

ಈ ಜಾಲದ ಮಾರಾಟದಲ್ಲಿ ಭಾಗಿಯಾಗಿದ್ದ ಐವರು ಭಾರತೀಯರು, ಅಮೆರಿಕ ಮತ್ತು ಇಂಡೊನೇಷ್ಯಾದ ಒಬ್ಬರು ಹಾಗೂ ಇಬ್ಬರು ನೈಜೀರಿಯಾ ಪ್ರಜೆಗಳನ್ನು ಬಂಧಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.