ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ‍ನಿರ್ಮಾಣ ಶೀಘ್ರ ಪೂರ್ಣಗೊಳ್ಳಲಿ: ಮೋಹನ್‌ ಭಾಗವತ್ ಪ್ರಾರ್ಥನೆ

Last Updated 24 ಅಕ್ಟೋಬರ್ 2018, 10:17 IST
ಅಕ್ಷರ ಗಾತ್ರ

ಪುಣೆ: ದೇಶದಲ್ಲಿ ರಾಮ ರಾಜ್ಯ ಮರುಕಳಿಸಲು ಅಯೋಧ್ಯೆಯಲ್ಲಿ ಆದಷ್ಟು ಬೇಗ ರಾಮ ಮಂದಿರ ನಿರ್ಮಾಣವಾಗಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್‌ ಶ್ರೀಮಂತ ದಗಡುಸೇಟ್‌ ಗಣಪತಿ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ದಗಡುಸೇಟ್‌ಹಲವಾಯಿ ಟ್ರಸ್ಟ್‌ನ ಪದಾಧಿಕಾರಿಗಳ ಎರಡು ವರ್ಷಗಳಿಂದ ಭಾಗವತ್ ಅವರನ್ನು ದೇವಸ್ಥಾನಕ್ಕೆ ಬರಬೇಕೆಂದು ಒತ್ತಾಯಿಸುತ್ತಿದ್ದರು. ಅಲ್ಲಿಗೆ ತೆರಳಿದ್ದ ಭಾಗವತ್‌ ಒಂದು ಗಂಟೆ ಇಪತ್ತು ನಿಮಿಷದವರೆಗೂ ದೇವಸ್ಥಾನದಲ್ಲಿ ಕಾಲಕಳೆದರು.

‘ಈ ದೇವಸ್ಥಾನಕ್ಕೆ ಬಂದು, ಗಣಪತಿಗೆ ಪಾರ್ಥನೆ ಸಲ್ಲಿಸಬೇಕೆಂಬುದು ನನ್ನ ಬಹುದಿನಗಳ ಬಯಕೆ. ಈಗ ಇಲ್ಲಿಗೆ ಬಂದಿದ್ದೇನೆ, ನನ್ನ ಮನಸ್ಸಿನಲ್ಲಿರುವ ಆಕಾಂಕ್ಷೆಯನ್ನು ದೇವರ ಮುಂದಿಡುತ್ತೇನೆ’ ಎಂದು ಭಾಗವತ್‌ ಹೇಳಿದರು.ಗಣಪತಿಗೆ ಅಭಿಷೇಕ ನಡೆಯುತ್ತಿರುವಾಗ ತಮ್ಮ ಪ್ರಾರ್ಥನೆ ಸಲ್ಲಿಸಿದ ಭಾಗವತ್‌ ‘ಶೀಘ್ರದಲ್ಲಿ ರಾಮಮಂದಿರ ನಿರ್ಮಾಣ ಪೂರ್ಣವಾಗಬೇಕು’ ಎಂದು ಕೇಳಿಕೊಂಡರು.

ಆರ್‌ಎಸ್‌ಎಸ್‌ ಪುಣೆ ಮಹಾನಗರ್‌ ಕಾರ್ಯವಾಹ್ ಮಹೇಶ್‌ ಕಾರ್ಪೆ, ‘ದೇಶದಲ್ಲಿ ಶಾಂತಿ, ನೆಮ್ಮದಿ ನೆಲಸಬೇಕು ಮತ್ತು ಕಾಲಕಾಲಕ್ಕೆ ಉತ್ತಮ ಮಳೆಯಾಗಬೇಕು ಎಂದು ಭಾಗವತ್‌ ಅವರು ಪ್ರಾರ್ಥಿಸಿದರು. ಜೊತೆಗೆ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳುವ ಬಗ್ಗೆಯೂ ಬೇಡಿದರು’ ಎಂದರು.

ಬಹಳ ದಿನಗಳಿಂದ ನಾವು ಕರೆಯುತ್ತಿದ್ದೆವು, ಮಂಗಳವಾರ ದೇವಸ್ಥಾನದಕ್ಕೆ ಬಂದಿದ್ದ ಮೋಹನ್‌ ಭಾಗವತ್‌ ಅವರು ಕೆಲ ಸಮಯ ದೇವಸ್ಥಾನದಲ್ಲಿ ಕಾಲಕಳೆದರು ಎಂದು ದಗಡುಸೇಟ್‌ ಹಲವಾಯಿ ಗಣಪತಿ ದೇವಸ್ಥಾನದ ಉತ್ಸವ ಮುಖ್ಯಸ್ಥ ಹೇಮಂತ್‌ ರಾಸ್ನೆ ಹೇಳಿದರು.ದೇವಸ್ಥಾನದ ಟ್ರಸ್ಟಿಗಳೊಂದಿಗೆ ಭಾಗವತ್‌ ಸಂವಾದ ನಡೆಸಿದರು. ಅಲ್ಲದೆ, ದೇವಸ್ಥಾನದ ಕೆಲಸಗಳನ್ನು ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT