ಪಾಕ್‌ನಿಂದ ‘ಸಮುದ್ರ ಜಿಹಾದ್‌’?

7
ಉಗ್ರ ಸಂಘಟನೆಗಳಿಂದ ತರಬೇತಿ: ಸಚಿವ ಹನ್ಸ್‌ರಾಜ್‌

ಪಾಕ್‌ನಿಂದ ‘ಸಮುದ್ರ ಜಿಹಾದ್‌’?

Published:
Updated:
Prajavani

ನವದೆಹಲಿ: ‘ಸಾಗರದ ಆಳದಿಂದ ದಾಳಿ ನಡೆಸುವ ‘ಸಮುದ್ರ ಜಿಹಾದ್‌’ಗೆ ಪಾಕಿಸ್ತಾನ ಮೂಲದ ಕೆಲವು ಉಗ್ರ ಸಂಘಟನೆಗಳು ಸಿದ್ಧತೆ ನಡೆಸಿವೆ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಹನ್ಸ್‌ರಾಜ್‌ ಅಹಿರ್‌ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ‘ಸಮುದ್ರ ಮಾರ್ಗದ ಮೂಲಕ ಭಾರತದ ಮೇಲೆ ದಾಳಿ ನಡೆಸುವ ಸಂಬಂಧ ಉಗ್ರ ಸಂಘಟನೆಗಳು ತಮ್ಮ ಸದಸ್ಯರಿಗೆ ತರಬೇತಿ ನೀಡುತ್ತಿವೆ’ ಎಂದರು.

‘ ತೈಲ ಸಂಸ್ಕರಣಾ ಘಟಕಗಳು, ಸರಕು ಸಾಗಣೆ ಹಡಗು ಹಾಗೂ ಬಂದರುಗಳ ಮೇಲೆ 2011ರಲ್ಲಿ ಮುಂಬೈ ಮೇಲೆ ನಡೆದ ದಾಳಿ ಮಾದರಿಯಲ್ಲಿಯೇ ಮತ್ತೊಂದು ದಾಳಿಗೆ ಯಾವುದಾದದರೂ ಉಗ್ರ ಸಂಘಟನೆ ಸಂಚು ರೂಪಿಸಿವೆಯೇ ಎಂಬ ಬಗ್ಗೆ ನಿರ್ದಿಷ್ಟ ಮಾಹಿತಿ ಇಲ್ಲ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !