ಶುಕ್ರವಾರ, ಜೂನ್ 5, 2020
27 °C

ಅಧಿಕಾರಕ್ಕೆ ಬರಲು ಬಿಜೆಪಿ ನನ್ನನ್ನು ಬಳಸಿಕೊಂಡಿದ್ದು ನಿಜ: ಅಣ್ಣಾ ಹಜಾರೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ಜೀವ ಉಳಿಸುವಂತೆ ಶಿವಸೇನಾ ಸೋಮವಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. 

‘ಮೊಂಡುತನ ಮತ್ತು ಹಟಮಾರಿ ಧೋರಣೆಗೆ ಅಣ್ಣಾ ಹಜಾರೆ ಅವರನ್ನು ಟೀಕಿಸಲಾಗುತ್ತದೆ. ಇದೇ ಗುಣಲಕ್ಷಣಗಳನ್ನು ಮೋದಿಯವರಲ್ಲೂ ಕಾಣಬಹುದು. ಆದರೆ ಅವರನ್ನು ಶ್ರೇಷ್ಠ ವ್ಯಕ್ತಿ ಎಂಬಂತೆ ಬಿಂಬಿಸಲಾಗುತ್ತದೆ’ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ ಸಂಪಾದಕೀಯದಲ್ಲಿ ಹೇಳಿದೆ.

‘ಮೊದಲು ಅಣ್ಣಾ ಹಜಾರೆ ಅವರ ಪ್ರಾಣ ಉಳಿಸಿ. ನಂತರ, ಏನು ಮಾಡಬಹುದು ಎಂಬುದನ್ನು ಚಿಂತಿಸೋಣ’ ಎಂದು ಹೇಳಿದೆ. 

‘ಈ ಕದನದಲ್ಲಿ ಅಣ್ಣಾ ಹಜಾರೆ ಅವರು ಪ್ರಾಣ ಕಳೆದುಕೊಳ್ಳಲಿ ಎಂಬುದೇ ಕೇಂದ್ರ ಸರ್ಕಾರದ ಬಯಕೆಯಾಗಿದ್ದರೆ, ಇದು ರಾಜ್ಯದ ಸಂಸ್ಕೃತಿ ರೋಗಗ್ರಸ್ಥವಾಗುತ್ತಿರುವ ಸಂಕೇತವನ್ನು ಪ್ರದರ್ಶಿಸುತ್ತದೆ’ ಎಂದು ಟೀಕಿಸಿದೆ. 

ಕೇಂದ್ರದಲ್ಲಿ ಲೋಕಪಾಲ್‌ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನು ಸ್ಥಾಪಿಸಬೇಕು ಮತ್ತು ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿ ಸ್ವಗ್ರಾಮದಲ್ಲಿ ಅಣ್ಣಾ ಹಜಾರೆ ಜ.30ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಆರನೇ ದಿನಕ್ಕೆ ಕಾಲಿಟ್ಟಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು