ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಭಟ್ ತ್ವರಿತ ನೇಮಕಕ್ಕೆ ಕೊಲಿಜಿಯಂ ಒತ್ತಾಯ

Last Updated 17 ಅಕ್ಟೋಬರ್ 2019, 18:44 IST
ಅಕ್ಷರ ಗಾತ್ರ

ನವದೆಹಲಿ: ನ್ಯಾಯಾಧೀಶ ಪಿ. ಕೃಷ್ಣ ಭಟ್‌ ಅವರನ್ನು ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ಕೊಲಿಜಿಯಂ, ಕೇಂದ್ರ ಸರ್ಕಾರವನ್ನು ಕೋರಿದೆ. ಭಟ್‌ ಅವರನ್ನು ನ್ಯಾಯಮೂರ್ತಿಯಾಗಿ ನೇಮಿಸುವ ಶಿಫಾರಸನ್ನು ಕೇಂದ್ರವು ಎರಡನೇ ಬಾರಿ ವಾಪಸ್‌ ಕಳುಹಿಸಿದೆ.

ಕೃಷ್ಣ ಭಟ್‌ ನೇಮಕಕ್ಕೆ 2016ರ ಆಗಸ್ಟ್ ಹಾಗೂ 2017ರ ಏಪ್ರಿಲ್‌ನಲ್ಲಿ ಕೊಲಿಜಿಯಂ ಎರಡು ಬಾರಿ ಶಿಫಾರಸು ಮಾಡಿತ್ತು. ಆದರೆ ಪ್ರಸ್ತಾವ ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರ ಈಗಲೂ ಮನವಿ ಮಾಡುತ್ತಿರುವುದು, ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಹಸ್ತಕ್ಷೇಪದಂತೆ ತೋರುತ್ತಿದೆ ಎಂದು ಕೊಲಿಜಿಯಂ ಅಸಮಾಧಾನ ವ್ಯಕ್ತಪಡಿಸಿದೆ.

ಭಟ್‌ ಅವರ ವಿರುದ್ಧ ನ್ಯಾಯಾಧೀಶೆಯೊಬ್ಬರು ಆರೋಪ ಮಾಡಿದ್ದರು. ಈಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿರುವ ದಿನೇಶ್‌ ಮಾಹೇಶ್ವರಿ, ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗಿದ್ದಾಗ ಈ ತನಿಖೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT