ಸುಪ್ರೀಂಕೋರ್ಟ್‌ನಲ್ಲಿ ಇಂದಿನಿಂದ ವಿಚಾರಣೆ

7
ರಾಮಜನ್ಮಭೂಮಿ–ಬಾಬ್ರಿಮಸೀದಿ ಭೂಮಿ ವಿವಾದ ಪ್ರಕರಣ

ಸುಪ್ರೀಂಕೋರ್ಟ್‌ನಲ್ಲಿ ಇಂದಿನಿಂದ ವಿಚಾರಣೆ

Published:
Updated:
Prajavani

ನವದೆಹಲಿ: ಅಯೋಧ್ಯೆಯಲ್ಲಿನ ರಾಮಮಂದಿರ–ಬಾಬ್ರಿ ಜನ್ಮಭೂಮಿ ವಿವಾದದ ಪ್ರಕರಣ ಸಂಬಂಧ ಸಲ್ಲಿಕೆಯಾಗಲಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಶುಕ್ರವಾರಕ್ಕೆ ದಿನಾಂಕ ನಿಗದಿಪಡಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಹಾಗೂ ನ್ಯಾಯಮೂರ್ತಿ ಎಸ್‌.ಕೆ.ಕೌಲ್‌ ಅವರ ಮುಂದೆ ಅರ್ಜಿ ವಿಚಾರಣೆ ನಡೆಯಲಿದೆ.

ವಿವಾದಿತ ಭೂಪ್ರದೇಶವನ್ನು ಹಂಚಿಕೆ ಮಾಡಿ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ.

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದವನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 27ರಂದು ತಿರಸ್ಕರಿಸಿತ್ತು. ಇದರಿಂದ ವಿವಾದಿತ ಭೂಪ್ರದೇಶಕ್ಕೆ ಸಂಬಂಧಿಸಿದ ವಿಚಾರಣೆ ಹಾದಿ ಸುಗಮವಾಗಿತ್ತು. ಈ ಹಿಂದೆ 1994ರಲ್ಲಿ ಇಸ್ಮಾಯಿಲ್‌ ಫಾರೂಕಿ ಪ್ರಕರಣದಲ್ಲಿ ನೀಡಿದ್ದ ‘ಮಸೀದಿಯು ಇಸ್ಲಾಂ‌ ಧರ್ಮದ ಅಂತರ್ಗತ ಅಂಶವಲ್ಲ’ ಎಂಬ ತೀರ್ಪನ್ನು ಮರು ಪರಿಶೀಲಿಸುವ ಬೇಡಿಕೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ (ಈಗ ನಿವೃತ್ತರಾಗಿದ್ದಾರೆ) ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಸೆಪ್ಟೆಂಬರ್ 27ರಂದು 2:1 ಬಹುಮತದಲ್ಲಿ ತಳ್ಳಿ ಹಾಕಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !