ನವದೆಹಲಿ: ‘ಮಧ್ಯಪ್ರದೇಶ ವಿಧಾನಸಭೆ ವಿಶೇಷ ಅಧಿವೇಶನವನ್ನು ಶುಕ್ರವಾರವೇ ಕರೆದು ವಿಶ್ವಾಸಮತ ಸಾಬೀತು ಪ್ರಕ್ರಿಯೆಯನ್ನು ಸಂಜೆ 5ಗಂಟೆ ಒಳಗೆ ಪೂರ್ಣಗೊಳಿಸಬೇಕು’ ಎಂದು ಸುಪ್ರೀ ಕೋರ್ಟ್ ಅಲ್ಲಿನ ಸ್ಪೀಕರ್‌ಗೆ ಆದೇಶಿಸಿತು.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು ಸ್ಪೀಕರ್ ಎನ್.ಪಿ.ಪ್ರಜಾಪತಿ ಅವರಿಗೆ ಈ ನಿರ್ದೇಶನ ನೀಡಿದ್ದು, ವಿಶ್ವಾಸಮತ ಕೋರುವ ಇಡೀ ಕಲಾಪದ ವಿಡಿಯೊ ಚಿತ್ರೀಕರಣ ಮಾಡಿಸಬೇಕು ಎಂದು ತಿಳಿಸಿತು.

ಅಲ್ಲದೆ, ಮುಖ್ಯಮಂತ್ರಿವಿಶ್ವಾಸಮತ ಕೋರುವ ಸಂದರ್ಭದಲ್ಲಿ 16 ಬಂಡಾಯ ಶಾಸಕರು ಸದನಕ್ಕೆ ಬರಲು ಬಯಸಿದರೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮಧ್ಯಪ್ರದೇಶ, ಕರ್ನಾಟಕ ರಾಜ್ಯಗಳ ಪೊಲೀಸ್ ವರಿಷ್ಠರಿಗೂ ನ್ಯಾಯಪೀಠ ಆದೇಶಿಸಿತು.

ವಿಶೇಷ ಅಧಿವೇಶನದ ಕಾರ್ಯಸೂಚಿ ವಿಶ್ವಾಸಮತ ಕೋರುವುದಷ್ಟೇ ಆಗಿರಬೇಕು. ಕಲಾಪಕ್ಕೆ ಯಾರೂ ಅಡ್ಡಿಪಡಿಸಬಾರದು. ಕಾನೂನು ಉಲ್ಲಂಘನೆ ಆಗದಂತೆ ಎಚ್ಚರವಹಿಸಬೇಕು ಎಂದು ವಿಧಾನಸಭೆ ಕಾರ್ಯದರ್ಶಿ ಅವರಿಗೆ ಸೂಚಿಸಿತು.

ವಿಡಿಯೊ ಸಂವಾದಕ್ಕೆ ಸೂಚನೆ: ಇದಕ್ಕೂ ಮುನ್ನ ಬೆಳಿಗ್ಗೆ ವಿಚಾರಣೆ ವೇಳೆ ನ್ಯಾಯಪೀಠವು ‘ಬಂಡಾಯ ಶಾಸಕರ ಜೊತೆ ವಿಡಿಯೊ ಸಂವಾದ ನಡೆಸಬೇಕು’ ಎಂದು ಸ್ಪೀಕರ್‌ಗೆ ಸಲಹೆ ಮಾಡಿತು..ಈ ಸಲಹೆಗೆ ಸ್ಪೀಕರ್ ಅಸಮ್ಮತಿ ಸೂಚಿಸಿದ್ದರು.

‘ವಿಡಿಯೊ ಚರ್ಚೆಗೆ ನೆರವಾಗಲು ಪೀಠವು ಬೆಂಗಳೂರು ಅಥವಾ ಇತರೆ ಸ್ಥಳಕ್ಕೆವೀಕ್ಷಕರನ್ನು ನಿಯೋಜಿಸಲಾಗುವುದು. ಈ ಮೂಲಕ ಶಾಸಕರ ಜೊತೆ ಚರ್ಚಿಸಿಸ್ಪೀಕರ್ ತೀರ್ಮಾನಿಸಬಹುದು’ ಎಂದು ಹೇಳಿತು.

ಅಲ್ಲದೆ, ‘ಬಂಡಾಯ ಶಾಸಕರು ನೀಡಿರುವ ರಾಜೀನಾಮೆ ಪತ್ರ ಕುರಿತಂತೆ ಯಾವುದಾದರೂ ವಿಚಾರಣೆ ನಡೆಸಲಾಗಿದೆಯೇ ಹಾಗೂ ಯಾವ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ನ್ಯಾಯಪೀಠವು ಸ್ಪೀಕರ್‌ಗೆ ಪ್ರಶ್ನಿಸಿತು.

ಸ್ಪೀಕರ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ.ಸಿಂಘ್ವಿ ಅವರು, ‘ಕೋರ್ಟ್ ಹೀಗೆ ಕಾಲಮಿತಿಯ ನಿರ್ದೇಶನವನ್ನು ಸ್ಪೀಕರ್‌ಗೆ ನೀಡಲು ಆರಂಭಿಸಿದರೆ, ಸಾಂವಿಧಾನಿಕವಾಗಿ ಸಮಸ್ಯೆಯಾಗಲಿದೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.