ರಾಮನ ಪ್ರತಿಮೆ ನಿರ್ಮಾಣ: ಗುಜರಾತ್‌ ಜತೆ ಒಡಂಬಡಿಕೆ

ಭಾನುವಾರ, ಮಾರ್ಚ್ 24, 2019
34 °C

ರಾಮನ ಪ್ರತಿಮೆ ನಿರ್ಮಾಣ: ಗುಜರಾತ್‌ ಜತೆ ಒಡಂಬಡಿಕೆ

Published:
Updated:

ಲಖನೌ: ಅಯೋಧ್ಯೆಯಲ್ಲಿ ದೊಡ್ಡ ಪ್ರಮಾಣದ ರಾಮನ ಪ್ರತಿಮೆ ನಿರ್ಮಾಣಕ್ಕೆ ತಾಂತ್ರಿಕ ಸಲಹೆ, ವಿನ್ಯಾಸ, ಮಾರ್ಗದರ್ಶನ ಪಡೆಯಲು ಗುಜರಾತ್‌ ಸರ್ಕಾರದೊಂದಿಗೆ ಉತ್ತರ ಪ್ರದೇಶ ಸರ್ಕಾರ ಒಪ್ಪಂದ ಮಾಡಿಕೊಂಡಿದೆ. 

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧ್ಯಕ್ಷತೆಯಲ್ಲಿ ಶನಿವಾರ ರಾತ್ರಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತ ಒಡಂಬಡಿಕೆಗೆ ಸಹಿ ಹಾಕಲು ಒಪ್ಪಿಗೆ ನೀಡಲಾಯಿತು ಎಂದು ಸರ್ಕಾರದ ವಕ್ತಾರ ಭಾನುವಾರ ತಿಳಿಸಿದ್ದಾರೆ.

ಪ್ರತಿಮೆ ನಿರ್ಮಾಣಕ್ಕೆ ವಿವರವಾದ ವರದಿ ಸಿದ್ಧಪಡಿಸಲು ಮತ್ತು ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಗುರುತಿಸಿರುವ 28.28 ಹೆಕ್ಟೇರ್‌ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ₹200 ಕೋಟಿ ಬಿಡುಗಡೆಗೆ ಸಭೆ ಒಪ್ಪಿಗೆ ನೀಡಿತು ಎಂದು ಅವರು ಹೇಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !