ಸೋಮವಾರ, ಜೂಲೈ 6, 2020
27 °C

ವಿಶ್ವಸಂಸ್ಥೆ: ಭಾರತದ ಹಿರಿಯ ಅಧಿಕಾರಿ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಜ‌ಂಟಿ ಸಿಬ್ಬಂದಿ ಪಿಂಚಣಿ ನಿಧಿಗೆ ಸಂಬಂಧಿಸಿದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿಗಳ ಪ್ರತಿನಿಧಿ ಸಮಿತಿಯ ಅಧಿಕಾರಿಯಾಗಿದ್ದ ಭಾರತದ ಸುಧೀರ್‌ ರಾಜ್‌ಕುಮಾರ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರೆಸ್‌ ಅವರು 2017ರಲ್ಲಿ ಇವರನ್ನು ನೇಮಕ ಮಾಡಿದ್ದರು. 

ರಾಜೀನಾಮೆಗೆ ಕಾರಣವೇನು ಎಂಬುದನ್ನು ಅಧಿಕೃತವಾಗಿ ತಿಳಿಸಿಲ್ಲ. ಗುಟೆರಸ್‌ ಅವರು ಇವರ ರಾಜೀನಾಮೆಯನ್ನು ಅಂಗೀಕರಿಸಿದ್ದು, ಸುಧೀರ್‌ ಅವರ ಸೇವೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಾರ್ಚ್‌ 31ರಂದು ಜಾರಿಗೆ ಬರುವಂತೆ ಸುಧೀರ್‌ ರಾಜ್‌ಕುಮಾರ್‌ ರಾಜೀನಾಮೆ ನೀಡಿರುವುದಾಗಿ ಗುಟೆರಸ್‌ ವಕ್ತಾರ ಸ್ಟೀಫನ್‌ ಗುಜಾರಿಕ್‌ ತಿಳಿಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು