ಬುಧವಾರ, ಆಗಸ್ಟ್ 4, 2021
20 °C
ರಾಹುಲ್‌ ಗಾಂಧಿ ಕುರಿತ ವಿಡಿಯೊ ನಕಲಿ ಅರೋಪ

ಶಿವರಾಜ್‌ ಸಿಂಗ್‌ ಚೌಹಾಣ್‌ ವಿರುದ್ಧ ಎಫ್ಐಆರ್‌: ದಿಗ್ವಿಜಯ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್‌: 2019ರಲ್ಲಿ ನಡೆದ ಲೋಕಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ರಾಹುಲ್ ‌ಗಾಂಧಿ ಭಾಷಣದ ವಿಡಿಯೊ ತುಣುಕು ನಕಲಿ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಆರೋಪಿಸಿದ್ದು, ಈ ಸಂಬಂಧ ಚೌಹಾಣ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವುದಾಗಿ ಮಂಗಳವಾರ ಹೇಳಿದ್ದಾರೆ. 

‘ನನ್ನ ವಿರುದ್ಧ ಶಿವರಾಜ್‌ ಸಿಂಗ್‌ ಚೌಹಾಣ್‌ ದೂರು ದಾಖಲಿಸಿದ್ದ ಪೊಲೀಸ್‌ ಠಾಣೆಯಲ್ಲಿಯೇ ಅವರ ವಿರುದ್ಧ ದೂರು ಸಲ್ಲಿಸಲು ಹೋಗಿದ್ದೆ’ ಎಂದು ದಿಗ್ವಿಜಯ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ರಾಹುಲ್‌ ಗಾಂಧಿ ಅವರು ಭಾಷಣ ಇರುವ ವಿಡಿಯೊ ಹಾಗೂ ಆ ವಿಡಿಯೊ ಕುರಿತು ಚೌಹಾಣ್‌ ಅವರು 2019ರ ಮೇ 16ರಂದು ಮಾಡಿದ್ದ ಟ್ವೀಟ್‌ ಅನ್ನು ಸಹ ದಿಗ್ವಿಜಯ್‌ ಸಿಂಗ್‌ ಹಂಚಿಕೊಂಡಿದ್ದಾರೆ.

2019ರ ಮೇ 14ರಂದು ಮಧ್ಯಪ್ರದೇಶದ ನೀಮುಚ್‌ ಎಂಬಲ್ಲಿ ರಾಹುಲ್‌ ಗಾಂಧಿ ಚುನಾವಣಾ ಪ್ರಚಾರ ಭಾಷಣ ಮಾಡಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು