ಸೋಮವಾರ, ಜನವರಿ 27, 2020
24 °C

ಜೆಎನ್‌ಯುನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಖಂಡಿಸಿದ ಅರವಿಂದ ಕೇಜ್ರಿವಾಲ್

ಪಿಟಿಐ  Updated:

ಅಕ್ಷರ ಗಾತ್ರ : | |

Minister Arvind Kejriwal

ನವದೆಹಲಿ: ಜೆಎನ್‌ಯುನಲ್ಲಿ ನಡೆದ ಹಿಂಸಾಚಾರ ಸುದ್ದಿ ಆಘಾತವನ್ನುಂಟು ಮಾಡಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
 
ವಿದ್ಯಾರ್ಥಿಗಳ ಮೇಲೆ ಗಂಭೀರ ಹಲ್ಲೆ ನಡೆದಿದೆ. ಪೊಲೀಸರು ತಕ್ಷಣವೇ ಹಿಂಸಾಚಾರವನ್ನು ನಿಲ್ಲಿಸಿ ಶಾಂತಿ ಸ್ಥಾಪಿಸಬೇಕು. ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗಡೆ ವಿದ್ಯಾರ್ಥಿಗಳು ಸುರಕ್ಷಿತರಾಗಿಲ್ಲದಿರುವಾಗ ದೇಶ ಹೇಗೆ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಕೇಜ್ರಿವಾಲ್  ಟ್ವೀಟಿಸಿದ್ದಾರೆ.

 ಜೆಎನ್‌ಯು ಶಿಕ್ಷಕರ ಸಂಘಟನೆ  ಆಯೋಜಿಸಿದ್ದ ಸಾರ್ವಜನಿಕ ಸಭೆ ವೇಳೆ ಜೆಎನ್‌ಯು ವಿದ್ಯಾರ್ಥಿ ಸಂಘಟನೆಗಳ ಯೂನಿಯನ್ ಮತ್ತು ಎಬಿವಿಪಿ ನಡುವೆ ಘರ್ಷಣೆಯುಂಟಾಗಿದೆ ಎಂದು ಮೂಲಗಳು  ಹೇಳಿವೆ.

ಇದನ್ನೂ ಓದಿಮುಖವಾಡ ಧರಿಸಿದ ದುಷ್ಕರ್ಮಿಗಳಿಂದ ಜೆಎನ್‌ಯು ವಿದ್ಯಾರ್ಥಿ, ಶಿಕ್ಷಕರ ಮೇಲೆ ಹಲ್ಲೆ

ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷೆ ಆಶೆ ಘೋಷ್ ಮತ್ತು ಇತರ ವಿದ್ಯಾರ್ಥಿಗಳ  ಮೇಲೆ ಎಬಿವಿಪಿ ಸದಸ್ಯರು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ವಿದ್ಯಾರ್ಥಿ ಸಂಘಟನೆಗಳ ಯೂನಿಯನ್ ಆರೋಪಿಸಿದೆ.
 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು