ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರ್ತುಪರಿಸ್ಥಿತಿಗಿಂತ ದೇಶದ ಈಗಿನ ಸ್ಥಿತಿ ಹೀನಾಯ: ಅರುಣ್ ಶೌರಿ

ಮುಂಬೈನ ಟಾಟಾ ಸಾಹಿತ್ಯ ಸಮ್ಮೇಳನದಲ್ಲಿ ಹೇಳಿಕೆ
Last Updated 19 ನವೆಂಬರ್ 2018, 8:34 IST
ಅಕ್ಷರ ಗಾತ್ರ

ಮುಂಬೈ: ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರು 1975–77ರ ಅವಧಿಯಲ್ಲಿ ಘೋಷಿಸಿದ್ದ ತುರ್ತುಪರಿಸ್ಥಿತಿಗಿಂತ ದೇಶದ ಇಂದಿನ ಪರಿಸ್ಥಿತಿ ಹೀನಾಯವಾಗಿದೆ ಎಂದು ಕೇಂದ್ರ ಮಾಜಿ ಸಚಿವ ಅರುಣ್ ಶೌರಿ ಅಭಿಪ್ರಾಯಪಟ್ಟರು.

ಮುಂಬೈನಲ್ಲಿ ನಡೆದ ಟಾಟಾ ಸಾಹಿತ್ಯ ಸಮ್ಮೇಳನದಲ್ಲಿ ‘ನ್ಯಾಯಾಂಗ ವ್ಯವಸ್ಥೆಯೊಳಗಿನ ಅಪಾಯ’ ಎಂಬ ವಿಚಾರದ ಕುರಿತು ಅವರು ಮಾತನಾಡಿ, ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಆಡಳಿತ ವೈಖರಿ ವಿರುದ್ಧ ಕಿಡಿಕಾರಿದರು.

ದೇಶದ ಪ್ರತಿಪಕ್ಷಗಳು ಹಾಗೂ ಬಿಜೆಪಿ ವಿರೋಧಿಗಳು ಒಗ್ಗೂಡಿದ್ದಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಬಗ್ಗು ಬಡಿಯಬಹುದು ಎಂದು ಹೇಳಿದರು.

1975ರಲ್ಲಿ ತುರ್ತುಪರಿಸ್ಥಿತಿ ಘೋಷಿಸಿದಾಗ ಇದ್ದುದಕ್ಕಿಂತಲೂ ದೇಶದ ಈಗಿನ ಪರಿಸ್ಥಿತಿ ಹೀನಾಯವಾಗಿದೆ. ಇಂದಿರಾ ಗಾಂಧಿ ಹಾಗೂ ಮೋದಿ ಅವರಿಗೆ ಬಹಳ ವ್ಯತ್ಯಾಸವಿದೆ. ಇಂದಿರಾ ಗಾಂಧಿಗೆ ತಾವು ಘೋಷಿಸಿದ್ದತುರ್ತುಪರಿಸ್ಥಿತಿ ಬಗ್ಗೆ ಪಶ್ಚಾತ್ತಾಪವಿತ್ತು ಎಂದರು.

ಆದರೆ ಮೋದಿಗೆ ಇಂದಿನ ದೇಶದ ಪರಿಸ್ಥಿತಿ ಬಗ್ಗೆ ಯಾವುದೇ ಮರುಕವಿಲ್ಲ. ಆಗ ಇಂದಿರಾಗಾಂಧಿ ಅವರು 1.75ಲಕ್ಷ ಮಂದಿಯನ್ನು ಜೈಲಿಗೆ ಅಟ್ಟಿದ್ದರೂ ಅವರಿಗೆ ತಮ್ಮಮಿತಿಯ ಅರಿವಿತ್ತು. ಆದರೆ ಇಂದು ಮೋದಿಗೆ ಮಿತಿಯ ಕುರಿತಾದಜ್ಞಾನವೇ ಇಲ್ಲ ಎಂದು ಹರಿಹಾಯ್ದರು.

ಅಂದಿನತುರ್ತುಪರಿಸ್ಥಿತಿ ಕೇವಲ 19 ತಿಂಗಳದ್ದು. ಆದರೆ ಇಂದಿನ ಪರಿಸ್ಥಿತಿ ಸ್ಥಿರಮತ್ತು ನಿರ್ದಯತೆಯಿಂದ ಕೂಡಿದೆ. ಎದುರಾಳಿಯನ್ನು ಸೋಲಿಸಲು ಮುಂದಿನ ಲೋಕಸಭೆ ಚುನಾವಣೆಯೇ ಅಸ್ತ್ರವಾಗಲಿದೆ ಎಂದರು.

2014ರಲ್ಲಿ ಮೋದಿಯ ಖ್ಯಾತಿ ಉತ್ತುಂಗಮಟ್ಟದಲ್ಲಿದ್ದರೂ ಅವರು ಗಳಿಸಿದ್ದ ಮತ ಎಷ್ಟು? ಕೇವಲ ಶೇ 31. ಅಂದರೆ ಶೇ 69ರಷ್ಟು ಮಂದಿ ಮೋದಿಯ ವಿರುದ್ಧ ಮತ ಚಲಾಯಿಸಿದ್ದರು.

ಅಕಸ್ಮಾತ್ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಬಲಗೊಂಡಲ್ಲಿ ಬಿಜೆಪಿ ಸೋಲನುಭವಿಸಲಿದೆ. ಹಾಗಾಗಿ ನಾವು ಕಾಂಗ್ರೆಸ್‌ಗೆ ಬೆಂಬಲ ನೀಡಬೇಕಾಗಿದೆ. ಜೊತೆಗೆಕಾಂಗ್ರೆಸ್ಪ್ರಾದೇಶಿಕವಾಗಿ ಎಲ್ಲೆಲ್ಲಿ ಬಲವಾಗಿನೆಲೆಯೂರಿದೆಯೋ ಅಂತಹ ಕಡೆ ಕಾಂಗ್ರೆಸ್‌ಗೆ ಹೆಚ್ಚಿನ ಬೆಂಬಲ ಕೊಡಬೇಕು. ಈ ಮೂಲಕ ಸರ್ವಾಧಿಕಾರ ಆಡಳಿತ ನಡೆಸಲು ಚಿಂತನೆ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಪಾಠ ಕಲಿಸಬೇಕು. ಈ ಪರಿಸ್ಥಿತಿಯನ್ನು ಎದುರಿಸಲು ಮುಂದಾಗದಿದ್ದಲ್ಲಿ, ದೇಶದಲ್ಲಿನ ಹೀನಾಯ ಪರಿಸ್ಥಿತಿ ಇನ್ನೂ ಮುಂದುವರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT