ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಆರು: ಕಷ್ಟದಲ್ಲಿರುವವರು ಸಾವಿರಾರು

Last Updated 9 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಈ ಋತುವಿನ ದ್ವಿತೀಯಾರ್ಧದಲ್ಲಿ ಬಿರುಸು ಪಡೆದಿರುವ ನೈರುತ್ಯ ಮುಂಗಾರು ಮಾರುತವು ದೇಶದ ಪಶ್ಚಿಮದ ರಾಜ್ಯಗಳಲ್ಲಿ ಉತ್ತಮ ಮಳೆ ತರುತ್ತಿದೆ. ಈ ರಾಜ್ಯಗಳ ಜಲಾಶಯಗಳು ಭರ್ತಿಯಾಗುತ್ತಿವೆ. ಇದರ ಮಧ್ಯೆಯೇ ಹಲವೆಡೆ ಮಳೆಯು ಪ್ರವಾಹವನ್ನೂ ಉಂಟು ಮಾಡಿದೆ. ಒಂದು ವಾರದಲ್ಲಿ ಮಳೆ ಸಂಬಂಧಿ ಘಟನೆಗಳಲ್ಲಿ 50ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಇನ್ನೂ ನಾಲ್ಕು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

ಗುಜರಾತ್

* ಗುಜರಾತ್‌ನ ಪೂರ್ವ ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ

* ಮಧ್ಯಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ನರ್ಮದಾ ನದಿ ಉಕ್ಕಿ ಹರಿಯುತ್ತಿದೆ

* ನರ್ಮದಾಗೆ ಅಡ್ಡಲಾಗಿ ಗುಜರಾತ್‌ನಲ್ಲಿ ಕಟ್ಟಿರುವ ಸರ್ದಾರ್ ಸರೋವರ ಜಲಾಶಯವು ನಿಗದಿತ ಮಟ್ಟದವರೆಗೆ ಭರ್ತಿಯಾಗಿದೆ

**
ಮಹಾರಾಷ್ಟ್ರ

* 2 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಇವರನ್ನೆಲ್ಲಾ ನಿರಾಶ್ರಿತ ಶಿಬಿರಗಳಲ್ಲಿ ಇರಿಸಲಾಗಿದೆ

* ಸಾಂಗ್ಲಿ, ಪುಣೆ, ಕೊಲ್ಲಾಪುರ, ಸೊಲ್ಲಾಪುರ ಮತ್ತು ಸತಾರಾ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ

* ಅಕೋಲಾ ಜಿಲ್ಲೆಯಲ್ಲಿ ಚಂದ್ರಿಕಾ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಅರಣ್ಯ ಇಲಾಖೆಯ 27 ದಿನಗೂಲಿ ನೌಕರರನ್ನು ರಕ್ಷಿಸಲಾಗಿದೆ
**

ಕೇರಳ

* ಕೇರಳದಲ್ಲೂ ಭಾರಿ ಮಳೆ ಮುಂದುವರಿದಿದೆ. 14 ಜಿಲ್ಲೆಗಳಲ್ಲಿ ಪ್ರವಾಹದ ಸ್ಥಿತಿ ಇದ್ದು, ಕಟ್ಟೆಚ್ಚರ ಘೋಷಿಸಲಾಗಿದೆ

* ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಭಾನುವಾರ ಮಧ್ಯಾಹ್ನದವರೆಗೆ ರದ್ದು ಮಾಡಲಾಗಿದೆ

* ಅಲೆಪ್ಪಿಯಲ್ಲಿ ನಡೆಯಬೇಕಿದ್ದ ಸಾಂಪ್ರದಾಯಿಕ ದೋಣಿ ಸ್ಪರ್ಧೆಯನ್ನು ಪ್ರವಾಹದ ಕಾರಣ ಮುಂದೂಡಲಾಗಿದೆ
**

ಕರ್ನಾಟಕ

* 12 ಜಿಲ್ಲೆಗಳ (ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು ಮತ್ತು ಚಿಕ್ಕಮಗಳೂರು) ಹಲವೆಡೆ ಪ್ರವಾಹ

* 1.24 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ

* ವಾಯುಪಡೆಯ 2 ಹೆಲಿಕಾಪ್ಟರ್‌ಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ

* ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಹಲವೆಡೆ ಶನಿವಾರವೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ

**
ತಮಿಳುನಾಡು

* 91.1 ಸೆಂ.ಮೀ. ಊಟಿಯಲ್ಲಿ 24 ಗಂಟೆಯಲ್ಲಿ ಸುರಿದ ಮಳೆ

* 213.6 ಸೆಂ.ಮೀ. ಊಟಿಯಲ್ಲಿ 72 ಗಂಟೆಯಲ್ಲಿ ಸುರಿದ ಮಳೆಯ ಪ್ರಮಾಣ

* ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಮಳೆ ಸಂಬಂಧಿ ಅವಘಡಗಳಲ್ಲಿ 5 ಮಂದಿ ಮೃತಪಟ್ಟಿದ್ದಾರೆ

* 20 ರೈಲುಗಳ ಸಂಚಾರ ರದ್ದು. ಪಾಲಕ್ಕಾಡ್ ಜಿಲ್ಲೆಯಲ್ಲಿ ಹಳಿಗಳು ಪ್ರವಾಹದ ನೀರಿನಲ್ಲಿ ಜಲಾವೃತವಾಗಿರುವ ಕಾರಣ ರೈಲುಗಳ ಸಂಚಾರವನ್ನು ರದ್ದು ಮಾಡಲಾಗಿದೆ

* 28 ನಿರಾಶ್ರಿತ ಶಿಬಿರಗಳನ್ನು ಆರಂಭಿಸಲಾಗಿದೆ

* 1,704 ಜನರಿಗೆ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ

**

ರಕ್ಷಣೆಗೆ ಎನ್‌ಡಿಆರ್‌ಎಫ್‌, ಸೇನೆ ನಿಯೋಜನೆ

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ಕೇರಳ ಮತ್ತು ಗುಜರಾತ್‌ ರಾಜ್ಯಗಳ ಹಲವು ಜಿಲ್ಲೆಗಳಲ್ಲಿ ಶುಕ್ರವಾರವೂ ಪ್ರವಾಹ ಸ್ಥಿತಿ ಮುಂದುವರಿದಿದೆ. ಪ್ರವಾಹದಲ್ಲಿ ಸಿಲುಕಿರುವ ಜನರ ರಕ್ಷಣೆಗೆಂದು ಕೇಂದ್ರ ಗೃಹ ಸಚಿವಾಲಯವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) 83 ತಂಡಗಳನ್ನು ಈ ರಾಜ್ಯಗಳಿಗೆ ನಿಯೋಜನೆ ಮಾಡಿದೆ.

ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಅವರ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯ ನಂತರ ಕೇಂದ್ರ ಸರ್ಕಾರವು ಈ ಕ್ರಮ ತೆಗೆದುಕೊಂಡಿದೆ.

ಎನ್‌ಡಿಆರ್‌ಎಫ್‌ ಜತೆಗೆ ಭೂಸೇನೆ, ವಾಯುಪಡೆ, ನೌಕಾಪಡೆ ಮತ್ತು ಕರಾವಳಿ ಕಾವಲು ಪಡೆಯ 173 ತಂಡಗಳನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜನೆ ಮಾಡಲಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪರಿಸ್ಥಿತಿಯ ಮಾಹಿತಿ ಪಡೆದಿದ್ದಾರೆ, ಅಗತ್ಯ ಸಲಹೆಗಳನ್ನು ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

**

ಉತ್ತರಾಖಂಡ

* ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟದ ವರದಿಯಾಗಿದೆ. ಮೇಘಸ್ಫೋಟದಿಂದ ಉಂಟಾದ ದಿಢೀರ್ ಪ್ರವಾಹದಲ್ಲಿ ಇಬ್ಬರು ಮೃತಪಟ್ಟಿದ್ದಾರೆ

* ಪಂಜಾಬ್ ಮತ್ತು ಹರಿಯಾಣದ ಹಲವೆಡೆ ಭಾರಿ ಮಳೆಯಾಗಿದೆ

* ಗೋವಾದ ಹಲವೆಡೆ ಭಾರಿ ಮಳೆಯಾಗಿದೆ. ಪಣಜಿಯ ಕೆಲವೆಡೆ ಮಾತ್ರ ಪ್ರವಾಹದ ಸ್ಥಿತಿ ಇದೆ

* ರಾಜಸ್ಥಾನದ ಪೂರ್ವ ಭಾಗದ ಜಿಲ್ಲೆಗಳಲ್ಲಿ ಮಳೆಯಾಗಿದೆ

* ಆಂಧ್ರಪ್ರದೇಶದಲ್ಲೂ ಪ್ರವಾಹದ ಸ್ಥಿತಿ ಮುಂದುವರಿದಿದೆ

**

ಮಧ್ಯಪ್ರದೇಶ

* ರಾಜ್ಯದ ಹಲವೆಡೆ ಎರಡು ದಿನಗಳಿಂದ ಭಾರಿ ಮಳೆಯಾಗುತ್ತಿದೆ

* ಒಬ್ಬರ ಸಾವು

* ರಾಜಘಾಟ್‌ನಲ್ಲಿ ನರ್ಮದಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ

* 21 ಸೆಂ.ಮೀ. ರಾಜ್ಯದಲ್ಲಿ 24 ಗಂಟೆಗಳಲ್ಲಿ ಸುರಿದಿರುವ ಮಳೆಯ ಪ್ರಮಾಣ

* 1,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT