ಮಂಗಳವಾರ, ಡಿಸೆಂಬರ್ 10, 2019
26 °C
ಪಾಕ್ ಪಡೆಗಳಿಂದ ಕದನ ವಿರಾಮ ಉಲ್ಲಂಘನೆ

ಪಾಕ್ ಗುಂಡಿಗೆ ಭಾರತೀಯ ಯೋಧ ಹುತಾತ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಗಡಿನಿಯಂತ್ರಣ ರೇಖೆಯುದ್ದಕ್ಕೂ ಪಾಕ್ ಪಡೆಗಳು ಗುರುವಾರ ಅಪ್ರಚೋದಿತ ಗುಂಡಿನ ದಾಳಿ ನಡೆಸಿವೆ. ಪಾಕ್‌ ಸೇನೆಯ ಗುಂಡಿಗೆ ಭಾರತೀಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಬಾರಾಮುಲ್ಲಾ ಜಿಲ್ಲೆಯ ಉರಿ ಮತ್ತು ಕುಪ್ವಾರಾ ಜಿಲ್ಲೆಯ ಮಚಿಲ್ ವಲಯಗಳಲ್ಲಿ ಪಾಕ್ ಪಡೆಗಳ ದಾಳಿಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡಿದೆ. ಗುಂಡಿನ ಕಾಳಗ ತೀವ್ರಗೊಂಡ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕ್ ವಶದಲ್ಲಿರುವ ಕಾಶ್ಮೀರದ ನಡುವೆ ವಾಣಿಜ್ಯ ವ್ಯವಹಾರಗಳನ್ನು ರದ್ದುಪಡಿಸಲಾಯಿತು.

‘ಮಚಿಲ್ ವಲಯದಲ್ಲಿ ಬೆಳಿಗ್ಗೆ 10:45ಕ್ಕೆ ಪಾಕ್ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದವು. ಈ ವೇಳೆ ಯೋಧರೊಬ್ಬರು ಹುತಾತ್ಮರಾದರು’ ಎಂದು ಸೇನೆಯ ವಕ್ತಾರ ಕರ್ನಲ್ ರಾಜೇಶ್ ಕಾಲಿಯಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)