ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಪ್ರಯಾಣಿಕರಿಗೆ ಸೌಲಭ್ಯ: ಆ್ಯಪ್‌ನಲ್ಲೇ ದೂರು ದಾಖಲಿಸಿ

ರೈಲ್ವೆ ಪ್ರಯಾಣಿಕರಿಗೆ ಹೊಸ ಸೌಲಭ್ಯ
Last Updated 14 ಅಕ್ಟೋಬರ್ 2018, 19:40 IST
ಅಕ್ಷರ ಗಾತ್ರ

ನವದೆಹಲಿ: ರೈಲ್ವೆ ಪ್ರಯಾಣಿಕರು ಇನ್ನು ಮುಂದೆ ಮೊಬೈಲ್‌ ಆ್ಯಪ್‌ ಮೂಲಕವೇ ದೂರುಗಳನ್ನು ದಾಖಲಿಸಬಹುದು.

ಈ ದೂರುಗಳನ್ನು ‘ಶೂನ್ಯ ಎಫ್‌ಐಆರ್‌’ ಎಂದು ದಾಖಲಿಸಿಕೊಳ್ಳಲಾಗುವುದು ಮತ್ತು ತಕ್ಷಣವೇ ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್‌) ತನಿಖೆಯನ್ನು ಆರಂಭಿಸಲಿದೆ.

ಶೂನ್ಯ ಎಫ್‌ಐಆರ್‌ ಅಂದರೆ ಯಾವುದೇ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿಕೊಳ್ಳಬಹುದು. ಇದಕ್ಕೆ ಯಾವುದೇ ಸ್ಥಳ ಮತ್ತು ವ್ಯಾಪ್ತಿಯ ಮಿತಿ ಇಲ್ಲ.

ಕಿರುಕುಳ, ಕಳ್ಳತನ, ಮಹಿಳೆಯರ ಮೇಲೆ ನಡೆಯುವ ಕೃತ್ಯಗಳು ಸೇರಿದಂತೆ ವಿವಿಧ ಘಟನೆಗಳ ಬಗ್ಗೆ ದೂರುಗಳನ್ನು ಸಲ್ಲಿಸಬಹುದಾಗಿದೆ. ಸದ್ಯ ಪ್ರಾಯೋಗಿಕವಾಗಿ ಮಧ್ಯಪ್ರದೇಶದಲ್ಲಿ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಶೀಘ್ರದಲ್ಲೇ ದೇಶದಾದ್ಯಂತ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಆರ್‌ಪಿಎಫ್‌ ಮಹಾ ನಿರ್ದೇಶಕ ಅರುಣ್‌ ಕುಮಾರ್‌ ತಿಳಿಸಿದ್ದಾರೆ.

‘ಪ್ರಯಾಣಿಕರು ದೂರುಗಳನ್ನು ಸಲ್ಲಿಸಲು ಮುಂದಿನ ರೈಲ್ವೆ ನಿಲ್ದಾಣ ಬರುವವರೆಗೂ ಕಾಯಬೇಕಾಗಿಲ್ಲ. ಪ್ರಯಾಣಿಸುತ್ತಿರುವಾಗಲೇ ಮೊಬೈಲ್‌ ಆ್ಯಪ್‌ ಉಪಯೋಗಿಸಿಕೊಂಡು ದೂರು ಸಲ್ಲಿಸಬಹುದು. ಸಂಕಷ್ಟದಲ್ಲಿರುವ ಮಹಿಳೆಯರಿಗೆ ನೆರವಾಗಲು ಆ್ಯಪ್‌ನಲ್ಲಿ ವಿಶೇಷ ಬಟನ್‌ ಅಳವಡಿಸಲಾಗಿದೆ’ ಎಂದು ವಿವರಿಸಿದ್ದಾರೆ.

ಪ್ರಸ್ತುತ ಯಾವುದೇ ಅಹಿತಕರ ಘಟನೆಯ ಬಗ್ಗೆ ದೂರು ನೀಡಬೇಕಾದರೆ, ಟಿಕೆಟ್‌ ತಪಾಸಣಾಕಾರರು ನೀಡುವ ಅರ್ಜಿಯನ್ನು ಪ್ರಯಾಣಿಕರು ಭರ್ತಿ ಮಾಡಿಕೊಡಬೇಕು. ಬಳಿಕ ಅದನ್ನು ಮುಂದಿನ ನಿಲ್ದಾಣದಲ್ಲಿ ಆರ್‌ಪಿಎಫ್‌ಗೆ ವರ್ಗಾಯಿಸಲಾಗುತ್ತದೆ. ಈ ಅರ್ಜಿಯೇ ಎಫ್‌ಐಆರ್‌ ಆಗಿ ಬದಲಾಗುತ್ತದೆ. ಈ ವ್ಯವಸ್ಥೆ ವಿಳಂಬವಾಗುತ್ತಿರುವುದರಿಂದ ಪ್ರಯಾಣಿಕರಿಗೆ ತಕ್ಷಣವೇ ಪರಿಹಾರ ದೊರೆಯುತ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT