ಗುರುವಾರ , ನವೆಂಬರ್ 21, 2019
23 °C
‘ದ ಡಾಟರ್‌ ಫ್ರಂ ವಿಶ್ಶಿಂಗ್‌ ಟ್ರೀ’ ಬಿಡುಗಡೆಗೆ ಸಿದ್ಧ

ಸುಧಾಮೂರ್ತಿ ಅವರ ಹೊಸ ಕೃತಿಗೆ ‘ಪುರಾಣಗಳ ಸ್ತ್ರೀಪಾತ್ರ’ಗಳೇ ಸ್ಫೂರ್ತಿ

Published:
Updated:
Prajavani

ನವದೆಹಲಿ: ಲೇಖಕಿ ಸುಧಾಮೂರ್ತಿ ಅವರ ನೂತನ ಪುಸ್ತಕ ‘ದ ಡಾಟರ್‌ ಫ್ರಂ ವಿಶ್ಶಿಂಗ್‌ ಟ್ರೀ’ ಕೃತಿ ಬಿಡುಗಡೆಗೆ ಸಿದ್ಧವಾಗಿದೆ. ಪುರಾಣದಲ್ಲಿನ ಮಹಿಳೆಯರ ಕಥನ ಒಳಗೊಂಡಿದೆ ಎಂದು ಪ್ರಕಾಶನ ಸಂಸ್ಥೆ ಪುಫಿನ್‌ ತಿಳಿಸಿದೆ.

ಶಕ್ತಿ ಮತ್ತು ಭಮತಿ ಸೇರಿ ಭಾರತೀಯ ಪುರಾಣ ಕಥನಗಳಲ್ಲಿನ ಸ್ತ್ರೀಪಾತ್ರಗಳನ್ನು ಮುನ್ನೆಲೆಗೆ ತರುವ ಯತ್ನ ಇದಾಗಿದೆ ಎಂದು ಸಂಸ್ಥೆಯು ತಿಳಿಸಿದೆ.

ಮೃತನನ್ನು ಬದುಕಿಸುವ ಮಂತ್ರ, ಮಾಂತ್ರಿಕ ಮರ ಕುರಿತ ಉಲ್ಲೇಖವಿದೆ ಅಲ್ಲದೆ, ಅಸಹಾಯಕ ಸ್ಥಿತಿಯಲ್ಲಿ ಇದ್ದಾಗ ನೆರವಿಗೆ ಬರುವ ದೇವರು ಕುರಿತ ಕುತೂಹಲದ ಪ್ರಶ್ನೆಗೂ ಉತ್ತರಿಸಲಿದೆ ಎಂದು ಸಂಸ್ಥೆ ತಿಳಿಸಿದೆ.

ಪ್ರತಿಕ್ರಿಯಿಸಿ (+)