ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಜನರಿಗೆ ಅಗತ್ಯವಿರುವಷ್ಟು ಔಷಧಿಗಳ ಸಂಗ್ರಹ ಇದೆ: ಸದಾನಂದ ಗೌಡ 

Last Updated 17 ಏಪ್ರಿಲ್ 2020, 16:11 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿಅಗತ್ಯ ಔಷಧಿಗಳ ಸಂಗ್ರಹ ಇದೆ. ಜನರು ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಶುಕ್ರವಾರ ಹೇಳಿದ್ದಾರೆ.

ಕೋವಿಡ್ -19 ರೋಗಿಗಳ ಚಿಕಿತ್ಸೆಗಾಗಿ ಬಳಸುವ ಹೈಡ್ರೊಕ್ಸಿಕ್ಲೋರೋಕ್ವಿನ್, ಪ್ಯಾರಸಿಟಮೊಲ್ ಮತ್ತು ಅಜಿತ್ರೋಮೈಸಿನ್, ಆ್ಯಂಟಿ ಬಯಾಟಿಕ್ ಮಾತ್ರೆಗಳು ಸಾಕಷ್ಟು ಪ್ರಮಾಣದಲ್ಲಿವೆ ಎಂದು ಸಚಿವರು ಹೇಳಿದ್ದಾರೆ.

ದೇಶದ ಜನರಿಗೆ ಬೇಕಾದ ಔಷಧಿಗಳನ್ನು ತೆಗೆದಿರಿಸಿದ ನಂತರವೇ ಸರ್ಕಾರ ಹೊರದೇಶಗಳಿಗೆ ಔಷಧಿ ರಫ್ತು ಮಾಡುತ್ತದೆ.ಫಾರ್ಮಾ ಕಂಪನಿಗಳು ಈ ಔಷಧಿಗಳ ಉತ್ಪಾದನೆಗಳನ್ನು ಜಾಸ್ತಿ ಮಾಡಿದ್ದು ದೇಶದಲ್ಲ ಸಾಕಷ್ಟು ಪ್ರಮಾಣದಲ್ಲಿ ಎಪಿಐ ಇದೆ. ಕೇಂದ್ರ ಸರ್ಕಾರವು ಔಷಧಿ ಉತ್ಪಾದನೆಯ ಮೇಲೆ ತೀವ್ರ ನಿಗಾವಹಿಸಿದ್ದು, ಔಷಧ ಉದ್ಯಮದೊಂದಿಗೆಸದಾ ಸಂಪರ್ಕದಲ್ಲಿದೆ.

ಭಾರತದಲ್ಲಿ ಪ್ರತೀ ತಿಂಗಳು 95 ಲಕ್ಷ ಹೈಡ್ರೊಕ್ಸಿಕ್ಲೊರೊಕ್ವಿನ್ ಮಾತ್ರೆಗಳ ಅಗತ್ಯವಿದೆ. ಇದು ಮೂರು ತಿಂಗಳಿಗೆ ಸಾಕಾಗುವಷ್ಟು ಇದೆ.ವರ್ಷಕ್ಕೆ 2.5 ಕೋಟಿ ಅಜಿತ್ರೊಮೈಸಿನ್ ಮಾತ್ರೆಗಳ ಅಗತ್ಯವಿದೆ. ಪ್ರತಿ ವರ್ಷ ದೇಶದಲ್ಲಿ 9.6 ಕೋಟಿ ಮಾತ್ರೆಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ. ಸರಿ ಸುಮಾರು 482 ಕೋಟಿ ಪ್ಯಾರಸಿಟಮೊಲ್ ಮಾತ್ರೆಯ ಅಗತ್ಯವಿದೆ.

ಔಷಧ ಉದ್ಯಮಗಳೊಂದಿಗೆ ಸರ್ಕಾರ ಕಾರ್ಯವೆಸಗುತ್ತಿದ್ದು ಅಂಚೆ ಇಲಾಖೆಯ ಸಹಾಯದಿಂದ ಔಷಧಿಗಳ ಸರಬರಾಜು ಸಾಧ್ಯವಾಗುತ್ತಿದೆ.ಸ್ಪೆಷಲ್ ಪಾರ್ಸೆಲ್ ರೈಲು ಅಥವಾ ಕಾರ್ಗೊ ವಿಮಾನ ಮೂಲಕವೂ ಔಷಧಿ ಸರಬರಾಜು ನಡೆಯುತ್ತದೆ.ಈ ಕಂಪನಿಗಳು ಮಾಸ್ಕ್, ಸ್ಯಾನಿಟೈಸರ್ ಮತ್ತು ಪಿಪಿಇಗಳನ್ನೂ ತಯಾರಿಸುತ್ತಿವೆ.

ಜನೌಷಧಿ ಮೆಡಿಕಲ್ ಸ್ಟೋರ್‌ಗಳಲ್ಲಿಯೂ ಸಾಕಷ್ಟು ಔಷಧಿಗಳು ದಾಸ್ತಾನು ಇವೆ ಎಂದು ಸದಾನಂದ ಗೌಡ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT