ಶುಕ್ರವಾರ, ಜುಲೈ 1, 2022
26 °C

ಆಧಾರ್‌: ಬುಧವಾರ ಸುಪ್ರೀಂ ತೀರ್ಪು ಪ್ರಕಟಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿಶಿಷ್ಟ ಗುರುತು ಸಂಖ್ಯೆ ಯೋಜನೆಯನ್ನು (ಆಧಾರ್‌) ಪ್ರಶ್ನಿಸಿ ಸಲ್ಲಿಕೆಯಾದ 27 ಅರ್ಜಿಗಳ ವಿಚಾರಣೆ ‍ಪೂರೈಸಿರುವ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಬುಧವಾರ ತೀರ್ಪು ಪ್ರಕಟಿಸಲಿದೆ.

ಆಧಾರ್‌ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ಕಾನೂನುಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ತೀರ್ಪನ್ನು ಮೇನಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠ ಕಾಯ್ದಿರಿಸಿತ್ತು. ಬೆರಳಚ್ಚು, ಕಣ್ಣಿನ ಸ್ಕ್ಯಾನ್‌ ಸೇರಿದಂತೆ ನಾಗರಿಕರ ಖಾಸಗಿ ಮಾಹಿತಿಗಳನ್ನು  ಆಧಾರ್‌ ಸಂಗ್ರಹಿಸಿಕೊಂಡಿರುವುದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. 

ಖಾಸಗಿತನವನ್ನು ಎತ್ತಿ ಹಿಡಿದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ್ದರಿಂದಾಗಿ ಆಧಾರ್‌ ತೀರ್ಪಿನ ಬಗ್ಗೆಯೂ ಕುತೂಹಲ ಮೂಡಿದೆ. 

ಇನ್ನಷ್ಟು ಓದು

* ಖಾಸಗಿತನ– ‘ತನ್ನ ಪಾಡಿಗೆ ತಾನಿದ್ದುಬಿಡುವ ಹಕ್ಕು ಇದು’ ಎಂದು ನಾವು ಇದನ್ನು ಸಾಮಾನ್ಯವಾಗಿ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ,  ಬೇರೆ ಬೇರೆ ಸಂದರ್ಭಗಳಲ್ಲಿ ಇದು ಬೇರೆ ಬೇರೆ ಅರ್ಥ ನೀಡುತ್ತದೆ. ಪೂರ್ಣ ಓದು: ಇದೊಂಚೂರು ಖಾಸಗಿ

* ಸುಪ್ರೀಂ ಕೋರ್ಟ್‌: ಸಾಲುಗಟ್ಟಿವೆ ಮಹತ್ವದ ತೀರ್ಪುಗಳು

* ಒಂದು ತೀರ್ಪು: ಹಲವು ದೂರಗಾಮಿ ಪರಿಣಾಮ

* ಆಧಾರ್‌: ತೀರ್ಪು ಕಾಯ್ದಿರಿಸಿದ ಸಂವಿಧಾನ ಪೀಠ

* ಖಾಸಗಿತನದ ಹಕ್ಕು ಮೂಲಭೂತ ಹಕ್ಕು: ಸುಪ್ರೀಂಕೋರ್ಟ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು