ತ್ರಿರಾಷ್ಟ್ರ ಭೇಟಿ: ಪ್ರಯಾಣ ಆರಂಭಿಸಿದ ಸುಷ್ಮಾ ಸ್ವರಾಜ್‌

7

ತ್ರಿರಾಷ್ಟ್ರ ಭೇಟಿ: ಪ್ರಯಾಣ ಆರಂಭಿಸಿದ ಸುಷ್ಮಾ ಸ್ವರಾಜ್‌

Published:
Updated:

ನವದೆಹಲಿ: ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್‌ ಅವರು ಮಧ್ಯ ಏಷ್ಯಾದ ಮೂರು ರಾಷ್ಟ್ರಗಳ ಭೇಟಿಗಾಗಿ ಗುರುವಾರ ಪ್ರಯಾಣ ಆರಂಭಿಸಿದರು.

ಆಗಸ್ಟ್‌ 02 ರಿಂದ 05ರ ವರೆಗಿನ ಪ್ರವಾಸದ ವೇಳೆಯಲ್ಲಿ ಕಜಕಿಸ್ತಾನ್‌, ಕಿರ್ಗಿಸ್ತಾನ್‌ ಹಾಗೂ ಉಜ್ಬೇಕಿಸ್ತಾನ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ರಾಷ್ಟ್ರಗಳಿಗೆ ಇದು ತಮ್ಮ ಮೊದಲ ಭೇಟಿ ಎಂದು ಸುಷ್ಮಾ ಸ್ವರಾಜ್‌ ಹೇಳಿಕೊಂಡಿದ್ದಾರೆ.

ಮೂರೂ ರಾಷ್ಟ್ರಗಳ ವಿದೇಶಾಂಗ ಸಚಿವರೊಂದಿಗೆ ಸ್ವರಾಜ್‌ ಮಾತುಕತೆ ನಡೆಸಲಿದ್ದು, ಭಾರತ ಸಮುದಾಯದವರ ಜೊತೆಗೂ ಸಂವಾದ ನಡೆಸಲಿದ್ದಾರೆ.

ನೆರೆ ರಾಷ್ಟ್ರಗಳೊಂದಿಗಿನ ಸಹಕಾರ ಸಂಬಂಧವನ್ನು ವೃದ್ಧಿಸುವುದು, ಜಾಗತಿಕ ಮಟ್ಟದಲ್ಲಿ ರಾಜಕೀಯ ನಾಯಕತ್ವದ ಬಗೆಗಿನ ಚರ್ಚೆ, ಪ್ರಾದೇಶಿಕ ದ್ವಿಪಕ್ಷೀಯ ವಿಚಾರಗಳು ಹಾಗೂ ಮಧ್ಯ ಏಷ್ಯಾ– ಭಾರತ ಸಂಬಂಧ ವೃದ್ಧಿ ಕುರಿತು ಮಾತುಕತೆ ನಡೆಸುವುದು ಈ ಭೇಟಿಯ ಮುಖ್ಯ ಉದ್ದೇಶ.

ಭಾರತದ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಸ್ಮಾರಕವಿರುವ ಉಜ್ಬೇಕಿಸ್ತಾನದ ರಾಜಧಾನಿ ತಾಷ್ಕೆಂಟ್‌ಗೂ ಸುಷ್ಮಾ ಭೇಟಿ ನೀಡಲಿದ್ದಾರೆ.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !