ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಸಂಘಟನೆಯ ಪ್ರಮುಖರಿಂದ ರಜನಿಕಾಂತ್‌ ಭೇಟಿ

Last Updated 1 ಮಾರ್ಚ್ 2020, 10:49 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಮುಸ್ಲಿಂ ಸಂಘಟನೆ ‘ಜಮಾತ್‌ ಉಲ್‌ ಉಲಮಾ ಸಭಾ‘ದ ನಿಯೋಗ ಭಾನುವಾರ ದಕ್ಷಿಣ ಭಾರತದ ಖ್ಯಾತ ನಟ ರಜನಿಕಾಂತ್‌ ಅವರನ್ನು ಚೆನ್ನೈನ ಅವರ ನಿವಾಸದಲ್ಲಿ ಭೇಟಿ ಮಾಡಿತ್ತು.

ಭೇಟಿ ನಂತರ ಮಾತನಾಡಿದ ಸಂಘಟನೆಯ ಅಧ್ಯಕ್ಷ ಕೆ. ಎಂ ಬಖಾವಿ, ’ ಸಂಘದ ನಮ್ಮ ನಿಯೋಗ ಇಂದು ರಜನಿಕಾಂತ್‌ ಅವರನ್ನು ಭೇಟಿ ಮಾಡಿತು. ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆ ಬಗ್ಗೆ ಸಂಘಟನೆ ರಜನಿ ಅವರೊಂದಿಗೆ ಚರ್ಚೆ ನಡೆಸಿದೆ. ಎನ್‌ಪಿಆರ್‌ನಿಂದಾಗಿ ಮುಸ್ಲಿಮರು ಎದುರಿಸುವ ತೊಂದರೆಗಳನ್ನು ನಾವು ವಿವರಿಸಿದ್ದೇವೆ. ಅವರಿಗೆ ನಮ್ಮ ಮನವಿ ಅರ್ಥವಾಗಿದೆ. ಮುಸ್ಲಿಮರಲ್ಲಿರುವ ಆತಂಕ ನಿವಾರಣೆಯಾಗಲು ತಮ್ಮ ಕೈಲಾಗುವ ಸಹಾಯ ಮಾಡುವುದಾಗಿ ಅವರು ತಿಳಿಸಿದ್ದಾರೆ,’ ಎಂದು ತಿಳಿಸಿದರು.

ಸಿಎಎ ಪರ ನಿಲುವು; ಮುಸ್ಲಿಮರ ಪರವೂ ಒಲವು

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರೆನಿಸಿಕೊಂಡಿರುವ ರಜನಿಕಾಂತ್‌ ಅವರು ಈಗಾಗಲೇ ಕೇಂದ್ರದ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾದ ನಿಲುವು ತಳೆದಿದ್ದಾರೆ. ಸಿಎಎ ಮುಸ್ಲಿಮರಿಗೆ ಯಾವುದೇ ತೊಂದರೆ ಉಂಟುಮಾಡುವುದಿಲ್ಲ. ಒಂದು ವೇಳೆ ಮುಸ್ಲಿಮರಿಗೆ ಇದರಿಂದ ತೊಂದರೆಯಾದರೆ ಅದರ ವಿರುದ್ಧ ಮೊದಲು ನಾನೇ ಧ್ವನಿ ಎತ್ತುತ್ತೇನೆ ಎಂದು ಸೂಪರ್‌ಸ್ಟಾರ್ ರಜನಿಕಾಂತ್‌ ಈಗಾಗಲೇ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT