ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತಮ ಆಡಳಿತ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಉತ್ತಮ ಆರ್ಥಿಕ ಆಡಳಿತದಲ್ಲಿ ರಾಜ್ಯವೇ ಮೊದಲು
Last Updated 27 ಡಿಸೆಂಬರ್ 2019, 5:05 IST
ಅಕ್ಷರ ಗಾತ್ರ

ನವದೆಹಲಿ:ಸಿಬ್ಬಂದಿ ಸಚಿವಾಲಯದ ಅಂಕಿಅಂಶಗಳ ಆಧಾರದಲ್ಲಿ ಸಿದ್ಧಪಡಿಸಲಾಗಿರುವಉತ್ತಮ ಆಡಳಿತ ಸೂಚ್ಯಂಕ (ಜಿಜಿಐ) ಪಟ್ಟಿಯಲ್ಲಿ ಕರ್ನಾಟಕ ಮೂರನೇ ಸ್ಥಾನ ಪಡೆದಿದೆ. ತಮಿಳುನಾಡು ಅಗ್ರ ಸ್ಥಾನ ಪಡೆದುಕೊಂಡಿದ್ದು, ಮಹಾರಾಷ್ಟ್ರ ಎರಡನೇ ಸ್ಥಾನದಲ್ಲಿದೆ.

ಛತ್ತೀಸಗಡ ನಾಲ್ಕನೇ ಸ್ಥಾನದಲ್ಲಿದ್ದು, ಆಂಧ್ರ ಪ್ರದೇಶ, ಗುಜರಾತ್, ಹರಿಯಾಣ, ಕೇರಳ ಕ್ರಮವಾಗಿ ಐದು, ಆರು, ಏಳು ಮತ್ತು ಎಂಟನೇ ಸ್ಥಾನದಲ್ಲಿವೆ.

ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಮಧ್ಯ ಪ್ರದೇಶ (9), ಪಶ್ಚಿಮ ಬಂಗಾಳ (10), ತೆಲಂಗಾಣ (11), ರಾಜಸ್ಥಾನ (12), ಪಂಜಾಬ್ (13), ಒಡಿಶಾ (14), ಬಿಹಾರ (15), ಗೋವಾ (16), ಉತ್ತರ ಪ್ರದೇಶ (17), ಮತ್ತು ಜಾರ್ಖಂಡ್ 18ನೇ ಸ್ಥಾನಗಳಲ್ಲಿವೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ದೊಡ್ಡ ರಾಜ್ಯಗಳು, ಈಶಾನ್ಯ ಮತ್ತು ಹಿಲ್ ಸ್ಟೇಟ್‌ಗಳು, ಕೇಂದ್ರಾಡಳಿತ ಪ್ರದೇಶಗಳು ಎಂದು ಮೂರು ವಿಭಾಗಗಳಾಗಿ ಮಾಡಿ ರ್‍ಯಾಂಕಿಂಗ್ ನೀಡಲಾಗಿದೆ.

ಈಶಾನ್ಯ ಮತ್ತು ಹಿಲ್ ಸ್ಟೇಟ್‌ ವಿಭಾಗದಲ್ಲಿ ಹಿಮಾಚಲ ಪ್ರದೇಶ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಉತ್ತರಾಖಂಡ, ತ್ರಿಪುರ, ಮಿಜೋರಾಂ, ಸಿಕ್ಕಿಂ, ಅಸ್ಸಾಂ ನಂತರದ ಸ್ಥಾನಗಳಲ್ಲಿವೆ.ಕೇಂದ್ರಾಡಳಿತ ಪ್ರದೇಶ ವಿಭಾಗದಲ್ಲಿ ಪುದುಚೇರಿ ಮೊದಲ ಸ್ಥಾನದಲ್ಲಿದ್ದರೆ ಚಂಡೀಗಡ, ದೆಹಲಿ, ದಮನ್–ದಿಯು, ಅಂಡಮಾನ್–ನಿಕೋಬಾರ್ ದ್ವೀಪಗಳು, ದಾದ್ರಾ–ನಗರ್‌ಹವೇಲಿ ಮತ್ತು ಲಕ್ಷದ್ವೀಪ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಕೃಷಿ, ಕೈಗಾರಿಕೆ, ಆರ್ಥಿಕತ ಆಡಳಿತ ಸೇರಿದಂತೆ ವಿವಿಧ ಕ್ಷೇತ್ರಗಳ ಆಧಾರದಲ್ಲಿಯೂ ರ್‍ಯಾಂಕಿಂಗ್ ನೀಡಲಾಗಿದೆ.

ಆರ್ಥಿಕ ಆಡಳಿತದಲ್ಲಿ ಮೊದಲ ಸ್ಥಾನ:ಉತ್ತಮ ಆರ್ಥಿಕ ಆಡಳಿತದ ಆಧಾರದಲ್ಲಿ ಸಿದ್ಧಪಡಿಸಿದ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಮಹಾರಾಷ್ಟ್ರ, ತೆಲಂಗಾಣ, ಗುಜರಾತ್, ತಮಿಳುನಾಡು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT