ಟಿಡಿಪಿ ನಾಯಕ ರಮೇಶ್ ವಸತಿ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

7

ಟಿಡಿಪಿ ನಾಯಕ ರಮೇಶ್ ವಸತಿ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

Published:
Updated:

ಹೈದರಾಬಾದ್: ತೆಲುಗುದೇಶಂ ಪಕ್ಷದ ರಾಜ್ಯಸಭಾ ಸದಸ್ಯ ಸಿ.ಎಂ.ರಮೇಶ್ ಅವರ ಮನೆ ಮತ್ತು ಕಚೇರಿ ಮೇಲೆ ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ತೆರಿಗೆ ಪಾವತಿ ಮಾಡಲು ನುಣುಚಿಕೊಂಡಿದ್ದ ಸಂದೇಹದ ಮೇರೆಗೆ ಹೈದರಾಬಾದ್ ಮತ್ತು ಕಡಪಾದಲ್ಲಿರುವ ರಮೇಶ್ ಮನೆಗೆ ದಾಳಿ ನಡೆಸಲಾಗಿದೆ, ಈ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ರಮೇಶ್ ಇದು ಕೇಂದ್ರ ಸರ್ಕಾರದ ಸಂಚು ಎಂದು ಆರೋಪಿಸಿದ್ದಾರೆ.

ಟಿಡಿಪಿ ಮತ್ತು ರಮೇಶ್ ಅವರ ಕುಟುಂಬದ ಆಪ್ತಮೂಲಗಳ ಪ್ರಕಾರ ರಮೇಶ್ ಅವರ ಕಚೇರಿಗಳಲ್ಲಿ ಮತ್ತು ವ್ಯಾಪಾರ ಸಂಸ್ಥೆಯಾದ ರಿತ್ವಿಕ್ ಪ್ರಾಜೆಕ್ಟ್ಸ್ ನಲ್ಲಿ ಶುಕ್ರವಾರ ಬೆಳಗ್ಗೆ 9ಕ್ಕೆ ಏಕಕಾಲದಲ್ಲಿ ದಾಳಿ ನಡೆದಿತ್ತು. ಹೈದರಾಬಾದ್‍ನ ಜುಬಲೀ ಹಿಲ್ಸ್ ನಲ್ಲಿರುವ ಕಂಪನಿ ಪ್ರೊದತ್ತೂರ್ ನಗರ ಮತ್ತು ಕಡಪಾದಲ್ಲಿರುವ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ 60 ಅಧಿಕಾರಿಗಳು ದಾಳಿ ನಡೆಸಿದ್ದರು
ರಮೇಶ್ ಅವರ ಸಹೋದರ, ವ್ಯಾಪಾರ ಸಂಸ್ಥೆಯಲ್ಲಿ  ಪಾಲುದಾರನಾಗಿರುವ ಸಿ.ಎಂ. ರಾಜೇಶ್ ಅವರ ನಿವಾಸದ ಮೇಲೂ ದಾಳಿ ನಡೆದಿದೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಆಪ್ತರಾಗಿದ್ದಾರೆ ರಮೇಶ್.

ಎನ್‍ಡಿಎಯಿಂದ ಟಿಡಿಪಿ ಮೈತ್ರಿ ಕಳಚಿಕೊಂಡ ಕಾರಣ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಸುವ ಸಲುವಾಗಿ ನರೇಂದ್ರ ಮೋದಿ ಸರ್ಕಾರ ಈ ರೀತಿಯ ಸಂಚು ಮಾಡಿದೆ ಎಂದು ರಮೇಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
ನಾನು ಸರಿಯಾಗಿ ಆದಾಯ ತೆರಿಗೆ ಪಾವತಿ ಮಾಡುತ್ತಿದ್ದೇನೆ. ಹಾಗಾಗಿ ಐಟಿ ದಾಳಿ ಮೂಲಕ ನನ್ನನ್ನು ಬೆದರಿಸುವ ಅಗತ್ಯವಿಲ್ಲ. ಕಡಪಾದಲ್ಲಿ  ಉಕ್ಕು ಕಾರ್ಖಾನೆ ಬೇಡಿಕೆಯೊಡ್ಡಿ ನಾನು 20 ದಿನಗಳ ಉಪವಾಸ ಮಾಡಿದ್ದು, ಇದೇ ಬೇಡಿಕೆಯನ್ನು ಪದೇ ಪದೇ  ಕೇಳುತ್ತಿದ್ದೇನೆ. ಈ ಕಾರಣದಿಂದಾಗಿ ಕೇಂದ್ರ ಸರ್ಕಾರ ನನಗೆ ತೊಂದರೆ ನೀಡುತ್ತಿದೆ ಎಂದಿದ್ದಾರೆ ರಮೇಶ್. 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !