ಶನಿವಾರ, ಫೆಬ್ರವರಿ 22, 2020
19 °C

ಕೂಡಲೇ ಸರ್ಕಾರ ರಚಿಸಲು ಇಲ್ಲಿ ದುಷ್ಯಂತನಿಲ್ಲ: ಶಿವಸೇನ ನಾಯಕನ ಮಾರ್ಮಿಕ ಮಾತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ವಿಚಾರ ಬಿಜೆಪಿ ಮತ್ತು ಶಿವಸೇನೆ ನಡುವೆ ಭಿನ್ನಮತ ಸೃಷ್ಟಿಗೆ ಕಾರಣವಾಗಿದೆ. ಸರ್ಕಾರ ರಚನೆಯಲ್ಲಿ ಆಗುತ್ತಿರುವ ವಿಳಂಬದ ಕುರಿತು ಪ್ರತಿಕ್ರಿಯಿಸಿರುವ ಶಿವಸೇನೆ ನಾಯಕ, ಕೂಡಲೇ ಸರ್ಕಾರ ರಚನೆಯಾಗಲು ಮಹಾರಾಷ್ಟ್ರದಲ್ಲಿ ದುಷ್ಯಂತ್‌ ಇಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದಾರೆ. 

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ತಂದೆ ಜೈಲಿನಲ್ಲಿರುವ ದುಷ್ಯಂತ ಮಹಾರಾಷ್ಟ್ರದಲ್ಲಿ ಇಲ್ಲ. ಇಲ್ಲಿ ಇರುವುದು ನಾವು. ಸತ್ಯ ಮತ್ತು ಧರ್ಮದ ಮೇಲೆ ನಂಬಿಕೆ ಇಟ್ಟು ನಾವು ರಾಜಕೀಯ ಮಾಡುತ್ತಾ ಬಂದಿದ್ದೇವೆ,’ ಎಂದು ಶಿವಸೇನೆಯ ವಕ್ತಾರ ಸಂಜಯ್‌ ರಾವತ್‌ ಹೇಳಿದ್ದಾರೆ. 

ಇದನ್ನೂ ಓದಿ:  ರಾಜ್ಯಪಾಲರನ್ನು ಪ್ರತ್ಯೇಕವಾಗಿ ಭೇಟಿ ಮಾಡಲಿವೆ ಬಿಜೆಪಿ–ಶಿವಸೇನೆ

‘ಶರದ್‌ ಪವಾರ್ ಅವರು ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ವಿರೋಧಿ ವಾತಾವರಣ ಸೃಷ್ಟಿ ಮಾಡಿದವರು. ಅವರು ಬಿಜೆಪಿ ಜತೆಗೆ ಹೋಗುವ ಪ್ರಮೇಯವೇ ಇಲ್ಲ,’ ಎಂದೂ ಅವರು ತಿಳಿಸಿದರು. 

‘ಮಹಾರಾಷ್ಟ್ರದಲ್ಲಿ ಶಿವಸೇನೆಗೆ  ಹಲವು ಆಯ್ಕೆಗಳಿವೆ. ಅದರೆ, ಇತರರೊಂದಿಗೆ ಸೇರಿ ಸರ್ಕಾರ ರಚಿಸುವ ಪಾಪವನ್ನು ನಾವು ಮಾಡುವುದಿಲ್ಲ. ನಾವು ಯಾವಾಗಲು ಸತ್ಯದ ರಾಜಕೀಯ ಮಾಡುತ್ತಾ ಬಂದಿದ್ದೇವೆ. ನಾವು ಅಧಿಕಾರದಾಹಿಗಳಲ್ಲ,’ ಎಂದು  ಶಿವಸೇನೆಯ ವರಿಷ್ಠ ಉದ್ಧವ್ ಠಾಕ್ರೆ ಹೇಳಿರುವುದಾಗಿ ಸಂಜಯ್ ರಾವತ್  ಇದೇ ವೇಳೆ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು