ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು–ಕಾಶ್ಮೀರದ ಫೋಟೊ ಜರ್ನಲಿಸ್ಟ್‌ಗಳಿಗೆ 2020ರ ಪುಲಿಟ್ಜರ್‌ ಪ್ರಶಸ್ತಿ

Last Updated 5 ಮೇ 2020, 17:51 IST
ಅಕ್ಷರ ಗಾತ್ರ
ADVERTISEMENT
""
""
""
""

ಶ್ರೀನಗರ/ನ್ಯೂಯಾರ್ಕ್‌: ಜಮ್ಮು ಮತ್ತು ಕಾಶ್ಮೀರದ ಮೂವರು ಛಾಯಾಚಿತ್ರ ಪತ್ರಕರ್ತರಿಗೆ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಗೆ (2020ನೇ ಸಾಲಿಗೆ) ಭಾಜನರಾಗಿದ್ದಾರೆ. ಸಂವಿಧಾನದ ವಿಧಿ 371 ರದ್ದತಿ ನಂತರ ಲಾಕ್‌ಡೌನ್‌ ಚಿತ್ರಣ ಕುರಿತ ಚಿತ್ರಗಳಿಗೆ ಪ್ರಶಸ್ತಿ ಲಭಿಸಿದೆ.

ಮುಖ್ತಾರ್‌ ಖಾನ್‌, ಯಾಸಿನ್ ದರ್‌ ಮತ್ತು ಚನ್ನಿ ಆನಂದ್‌ ಪ್ರಶಸ್ತಿ ಪುರಸ್ಕೃತ ಛಾಯಾಚಿತ್ರ ಪತ್ರಕರ್ತರಾಗಿದ್ದು ಅಸೋಸಿಯೇಟೆಡ್‌ ಪ್ರೆಸ್‌ (ಎ.ಪಿ) ಸಂಸ್ಥೆಯ ಸಿಬ್ಬಂದಿ ಆಗಿದ್ದಾರೆ.

ಪ್ರಶಸ್ತಿ ಘೋಷಣೆಯ ಹಿಂದೆಯೇ ಮೂವರಿಗೂ ಅಭಿನಂದನೆಯ ಸುರಿಮಳೆಯಾಗುತ್ತಿದೆ. ‘ಕಾಶ್ಮೀರದಲ್ಲಿ ಪತ್ರಕರ್ತರಿಗೆ ಇದು ಕಷ್ಟದ ವರ್ಷ. 30 ವರ್ಷಗಳಲ್ಲಿ ಇಂಥ ದಿನಗಳನ್ನು ನೋಡಿರಲಿಲ್ಲ. ನಿಮ್ಮ ಕ್ಯಾಮೆರಾಗಳಿಗೆ ಇನ್ನಷ್ಟು ಶಕ್ತಿ ಬಂದಿದೆ. ಅಭಿನಂದನೆಗಳು’ ಎಂದು ನ್ಯಾಷನಲ್‌ ಕಾನ್ಫರೆನ್ಸ್ ನಾಯಕ ಓಮರ್‌ ಅಬ್ದುಲ್ಹಾ ಟ್ವೀಟ್ ಮಾಡಿದ್ದಾರೆ.

‘ಜಮ್ಮು ಮತ್ತು ಕಾಶ್ಮೀರ ಹಾಗೂ ಎಲ್ಲೆಡೆ ಇರುವ ಪತ್ರಕರ್ತರಿಗೆ ಇದೊಂದು ಹೆಮ್ಮೆಯ ಸಂಗತಿ’ ಎಂದು ಹಿರಿಯ ಪತ್ರಕರ್ತ ಯೂಸುಫ್‌ ಜಮೀಲ್‌ ಪ್ರತಿಕ್ರಿಯಿಸಿದ್ದಾರೆ.

ಇತರೆ ಪುರಸ್ಕೃತರು (ನ್ಯೂಯಾರ್ಕ್ ವರದಿ)‌:ಸುದ್ದಿ ಛಾಯಾಚಿತ್ರ ವಿಭಾಗದಲ್ಲಿ ಹಾಂಗ್‌ ಕಾಂಗ್‌ನಲ್ಲಿ ನಡೆದಿದ್ದ ಪ್ರತಿಭಟನೆಗೆ ಸಂಬಂಧಿಸಿದ ಚಿತ್ರಕ್ಕಾಗಿ ರಾಯಿಟರ್ಸ್ ಸುದ್ದಿಸಂಸ್ಥೆಗೆ ಪ್ರಶಸ್ತಿ ದೊರೆತಿದೆ.

ಅಲಾಸ್ಕಾದಲ್ಲಿ ಪೊಲೀಸ್‌ ವ್ಯವಸ್ಥೆ ಕುರಿತ ಸಮಗ್ರ ವರದಿಗೆ ‘ದ ಆಂಕರೇಜ್‌ ಡೈಲಿ ನ್ಯೂಸ್’, ‘ಪ್ರೊಪಬ್ಲಿಕಾ’ ಸಂಸ್ಥೆಗೆ ಪ್ರತಿಷ್ಠಿತ ಪುಲಿಟ್ಜರ್‌ ಪ್ರಶಸ್ತಿ ಲಭಿಸಿದೆ. ಅಲಾಸ್ಕಾ ದಲ್ಲಿ ಪ್ರತಿ 3ನೇ ಗ್ರಾಮಕ್ಕೆ ಪೊಲೀಸರ ಸುರಕ್ಷತೆ ಇಲ್ಲ ಎಂಬುದನ್ನು ವರದಿ ಬಿಂಬಿಸಿತ್ತು.

ತನಿಖಾ ವರದಿ ಮತ್ತು ಅಂತರರಾಷ್ಟ್ರೀಯ ವರದಿಗೆ ಇರುವ ಪ್ರಶಸ್ತಿಗಳು ನ್ಯೂಯಾರ್ಕ್‌ ಟೈಮ್ಸ್‌ಗೆ ಕ್ರಮವಾಗಿ ನ್ಯೂಯಾರ್ಕ್ ಸಿಟಿ ಟ್ಯಾಕ್ಸಿ ಉದ್ಯಮ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸರ್ಕಾರ ಕುರಿತ ವರದಿಗೆ ಈ ಪ್ರಶಸ್ತಿಗಳು ಬಂದಿವೆ.

ಅಧಿಕ ತಾಪಮಾನದಿಂದಾಗಿ ಪರಿಸರದ ಮೇಲಿನ ಪರಿಣಾಮಗಳು ಕುರಿತ ವಾಷಿಂಗ್ಟನ್‌ ಪೋಸ್ಟ್‌ ವಿಶ್ಲೇಷಣಾತ್ಮಕ ವರದಿಯನ್ನು ವಿಶೇಷವಾಗಿ ತೀರ್ಪುಗಾರರು ಶ್ಲಾಘಿಸಿದ್ದಾರೆ.

ಪ್ರಶಸ್ತಿ ಪ್ರಧಾನ ಸಮಾರಂಭ ಮೇ ತಿಂಗಳು ಕೊಲಂಬಿಯಾ ಯೂನಿವರ್ಸಿಟಿ ಸಭಾಂಗಣದಲ್ಲಿ ಸಾಮಾನ್ಯವಾಗಿ ನಡೆಯುತ್ತಿತ್ತು. ಕೊರೊನಾ ಹಿನ್ನೆಲೆಯಲ್ಲಿ ಮುಂದೂಡಿದ್ದು ನಂತರ ದಿನಾಂಕ ಪ್ರಕಟಿಸಲಾಗುವುದು ಎಂದು ಪುಲಿಟ್ಜರ್‌ ಮಂಡಳಿ ತಿಳಿಸಿದೆ.

ಪತ್ರಿಕೋದ್ಯಮ ಕ್ಷೇತ್ರದ ಪ್ರತಿಷ್ಠಿತ ಪ್ರಶಸ್ತಿ ಇದಾಗಿದ್ದು, ಪ್ರಥಮ ಪ್ರಶಸ್ತಿ ಪ್ರದಾನ ಸಮಾರಂಭ 1917ರಲ್ಲಿ ನಡೆದಿತ್ತು.

'ಕಾಶ್ಮೀರದಲ್ಲಿ ಜರ್ನಲಿಸ್ಟ್‌ಗಳಿಗೆ ಕಷ್ಟದ ಕಾಲವಾಗಿದೆ ಹಾಗೂ ಕಳೆದ 30 ವರ್ಷಗಳಿಂದಲೂ ಸಹ ಸುಲಭದ್ದಾಗಿಲ್ಲ. ಪ್ರತಿಷ್ಠಿತ ಪ್ರಶಸ್ತಿ ಪಡೆದಿರುವ ಮೂವರಿಗೂ ಅಭಿನಂದನೆಗಳು. ನಿಮ್ಮ ಕ್ಯಾಮೆರಾಗಳಿಗೆ ಇನ್ನಷ್ಟು ಸಾಮರ್ಥ್ಯ ಸಿಕ್ಕಂತಾಗಿದೆ' ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಮುಖಂಡ ಓಮರ್‌ ಅಬ್ದುಲ್ಲಾ ಟ್ವೀಟಿಸಿದ್ದಾರೆ.

ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜಾ ಮುಫ್ತಿ ಫೋಟೊಜರ್ನಲಿಸ್ಟ್‌ಗಳಿಗೆ ಅಭಿನಂದನೆ ಸಲ್ಲಿಸುತ್ತ, 'ಕೇಂದ್ರಾಡಳಿತ ಪ್ರದೇಶದ ವರದಿಗಾರರು ವಿದೇಶಗಳಲ್ಲಿ ಪ್ರಶಸ್ತಿಗಳನ್ನು ಜಯಸುತ್ತಿದ್ದಾರೆ, ಆದರೆ ಸ್ವಂತ ನಾಡಿನಲ್ಲಿ ಅವರು ಶಿಕ್ಷೆ ಅನುಭವಿಸುತ್ತಾರೆ' ಎಂದಿದ್ದಾರೆ.

ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರ ವಲಯದ ಜರ್ನಲಿಸ್ಟ್‌ಗಳಿಗೆ ಪುಲಿಟ್ಜರ್‌ ಗೌರವ ಸಂದಿದೆ. 'ಜಮ್ಮು ಮತ್ತು ಕಾಶ್ಮೀರ ಹಾಗೂ ಅದರಾಚೆಗಿನ ಜರ್ನಲಿಸ್ಟ್‌ ಸಮುದಾಯಕ್ಕೆ ಹೆಮ್ಮೆಯ ಸಂದರ್ಭವಾಗಿದೆ' ಎಂದು ಹಿರಿಯ ಜರ್ನಲಿಸ್ಟ್‌ ಯೂಸುಫ್‌ ಜಮೀಲ್‌ ಹೇಳಿದ್ದಾರೆ.

ಡಾರ್‌ ಯಾಸೀನ್‌, ಮುಖ್ತಾರ್‌ ಖಾನ್‌ ಹಾಗೂ ಚನ್ನೀ ಆನಂದ್

ಪುಲಿಟ್ಜರ್‌ ಪ್ರಶಸ್ತಿ ಪಡೆದಿರುವ ಚಿತ್ರ ಸರಣಿಯ ಪೈಕಿ ಕೆಲವು ಚಿತ್ರಗಳು ಇಲ್ಲಿವೆ:

ಶ್ರೀನಗರದಲ್ಲಿ ಜಮ್ಮು–ಕಾಶ್ಮೀರ ಪೊಲೀಸ್‌ ವಾಹನದ ಮೇಲೆ ಕಲ್ಲು ತೂರಿದ ಮುಖ ಮುಚ್ಚಿಕೊಂಡಿರುವ ಕಾಶ್ಮೀರಿ ಪ್ರತಿಭಟನೆಕಾರ– ಚಿತ್ರ: ಡಾರ್‌ ಯಾಸಿನ್‌
ಶ್ರೀನಗರದಲ್ಲಿ ಕರ್ಫ್ಯೂ ರೀತಿ ನಿರ್ಬಂಧದ‌ದಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುತ್ತಿರುವ ಮುಸ್ಲಿಮರು, ಭದ್ರತೆಗೆ ನಿಯೋಜನೆಯಾಗಿರುವ ಪ್ಯಾರಾಮಿಲಿಟರಿ ಪಡೆಯ ಯೋಧ– ಚಿತ್ರ:ಮುಖ್ತಾರ್‌ ಖಾನ್
ಭಾರತ–ಪಾಕಿಸ್ತಾನ ಗಡಿ ಭಾಗದಲ್ಲಿ ಬಿಎಸ್‌ಎಫ್‌ ಯೋಧ ನಿಗಾವಹಿಸಿರುವುದು– ಚಿತ್ರ: ಚನ್ನೀ ಆನಂದ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT