ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ರಾಷ್ಟ್ರೀಯ ಉದ್ಯಾನದಲ್ಲಿ ಪಟ್ಟೆ ಹುಲಿ ಪತ್ತೆ

Last Updated 18 ಮೇ 2019, 19:04 IST
ಅಕ್ಷರ ಗಾತ್ರ

ಪಣಜಿ: ದಕ್ಷಿಣ ಗೋವಾದಲ್ಲಿರುವ ಭಗವಾನ್ ಮಹಾವೀರ್ ರಾಷ್ಟ್ರೀಯ ಉದ್ಯಾನದಲ್ಲಿ ಮೊದಲ ಬಾರಿಗೆ ಪಟ್ಟೆ ಹುಲಿ ಪತ್ತೆಯಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೃಢಪಡಿಸಿದ್ದಾರೆ.

240 ಚದರ ಕಿ.ಮೀ. ವಿಸ್ತೀರ್ಣದಲ್ಲಿರುವ ಉದ್ಯಾನದಲ್ಲಿಕಳೆದೊಂದು ವರ್ಷದಿಂದ ಹುಲಿ ಇರುವಿಕೆಯನ್ನುದಾಖಲಿಸಲು ಅರಣ್ಯ ಇಲಾಖೆ ಪ್ರಯತ್ನಿಸುತ್ತಿತ್ತು.ಮೇ 14ರಂದು ಕ್ಯಾಮೆರಾ ಟ್ರ್ಯಾಪಿಂಗ್ ವಿಧಾನದಲ್ಲಿಹುಲಿ ಪತ್ತೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ವೈಜ್ಞಾನಿಕ ನಿರ್ವಹಣೆಗಾಗಿಉದ್ಯಾನದಲ್ಲಿನ ಎಲ್ಲಾ ಬಗೆಯ ಸಸ್ತನಿ ವರ್ಗದ ಪ್ರಾಣಿಗಳ ಇರುವಿಕೆಯನ್ನು ದಾಖಲಿಸಲಾಗುತ್ತಿದೆ. ಉದ್ಯಾನದ ಸಿಬ್ಬಂದಿ ಕಾಡಿನೊಳಗೆ ಭೇಟಿ ನೀಡಿದ ಸಂದರ್ಭದಲ್ಲಿ ವನ್ಯಜೀವಿಗಳ ಚಲನವಲನಗಳ ಕುರಿತು ಸಾಕ್ಷ್ಯ ಸಂಗ್ರಹಿಸಲು ಸೂಚಿಸಲಾಗಿತ್ತು. ಕ್ಯಾಮೆರಾ ಟ್ರ್ಯಾಪಿಂಗ್ ಮುಖಾಂತರ ಛಾಯಾಚಿತ್ರ ಸಹಿತ ದಾಖಲೆ ಸಂಗ್ರಹಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

‘ಪಶ್ಚಿಮ ಘಟ್ಟಕ್ಕೆ ಹೊಂದಿಕೊಂಡಿರುವಂತೆಗೋವಾದಲ್ಲಿಆರು ವನ್ಯಜೀವಿ ಅಭಯರಣ್ಯಗಳಿದ್ದು, ಒಂದು ರಾಷ್ಟ್ರೀಯ ಉದ್ಯಾನವಿದೆ. ಇಲ್ಲಿನವನ್ಯಜೀವಿಗಳನ್ನು ದಾಖಲಿಸುವ ಉದ್ದೇಶದಿಂದ ಹೆಚ್ಚು ಕ್ಯಾಮೆರಾ ಟ್ರ್ಯಾಪಿಂಗ್ ಉಪಕರಣಗಳನ್ನು ಖರೀದಿಸಲಾಗುತ್ತಿದೆ’ ಎಂದು ರೇಂಜ್ ಅರಣ್ಯಾಧಿಕಾರಿ ಪರೇಶ್ ಪರೂಬ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT