ಬೆದರಿಕೆಗೆ ಹೆದರುವುದಿಲ್ಲ: ಬೇಳೂರ್‌ಗೆ ಮೋದಿ ಗುದ್ದು

ಭಾನುವಾರ, ಮಾರ್ಚ್ 24, 2019
31 °C

ಬೆದರಿಕೆಗೆ ಹೆದರುವುದಿಲ್ಲ: ಬೇಳೂರ್‌ಗೆ ಮೋದಿ ಗುದ್ದು

Published:
Updated:
Prajavani

ಕಾಂಚೀಪುರಂ (ತಮಿಳುನಾಡು): ‘ಮೋದಿಗೆ ಗುಂಡಿಕ್ಕಿ’ ಎಂದಿದ್ದ ಕಾಂಗ್ರೆಸ್‌ನ ಬೇಳೂರು ಗೋಪಾಲಕೃಷ್ಣ ಅವರ ಮಾತಿಗೆ ಮೋದಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ವಿರುದ್ಧದ ಯಾವುದೇ ಬೆದರಿಕೆ ಹಾಗೂ ನಿಂದನೆಗಳಿಗೆ ಕಿವಿಗೊಡುವುದಿಲ್ಲ ಎಂದಿರುವ ಅವರು, ‘ನನ್ನ ದೇಹದ ಪ್ರತಿ ಹನಿಯೂ ಭಾರತಕ್ಕಾಗಿ ಮೀಸಲು’ ಎಂದು ಹೇಳಿದ್ದಾರೆ. 

‘ನನ್ನ ಕೆಲಸ ಮಾಡಲು ಮಾತ್ರ ನಾನಿಲ್ಲಿದ್ದೇನೆ. ಭಾರತವನ್ನು ಸುಭದ್ರ ಹಾಗೂ ಸಮೃದ್ಧಗೊಳಿಸಲು ಸಾಧ್ಯವಿ
ರುವ ಎಲ್ಲ ಯತ್ನಗಳನ್ನೂ ಮಾಡುವುದು ಮಾತ್ರ ನನ್ನ ಕೆಲಸ’ ಎಂದು ಮೋದಿ ಹೇಳಿದ್ದಾರೆ. ವಿರೋಧ ಪಕ್ಷಗಳು ರಾಜಕೀಯ ಹಾಗೂ ಸ್ವಹಿತಾಸಕ್ತಿಯಿಂದ ಕೆಲಸ ಮಾಡುತ್ತಿವೆ ಎಂದು ದೂರಿದ್ದಾರೆ. 

‘ನಿಂದನೆ ಮಾಡುವ ಪ್ರವೃತ್ತಿ ದಿನೇ ದಿನೇ ಹೆಚ್ಚುತ್ತಿದ್ದು, ಇದರಲ್ಲಿ ಯಾರು ಹೆಚ್ಚು ನಿಂದನೆ ಮಾಡುತ್ತಾರೆ ಎಂಬ ಬಗ್ಗೆ ಅವರಲ್ಲೇ ಸ್ಪರ್ಧೆ ಇದೆ’ ಎಂದು ಲೇವಡಿ ಮಾಡಿದರು. 

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !