ಜೆಮ್‌ಶೆಡ್‌ಪುರ: ರೈಲ್ವೆ ಪ್ಲಾಟ್‌ಫಾರಂನಲ್ಲಿ ತಾಯಿಯೊಂದಿಗೆ ಮಲಗಿದ್ದ 3 ವರ್ಷದ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ ದುರುಳರು, ಬಾಲಕಿಯ ರುಂಡ ಕಡಿದು ಬಿಸಾಡಿದ ಹೀನಕೃತ್ಯ ಜಾರ್ಖಂಡ್‌ನ ಜೆಮ್‌ಶೆಡ್‌ಪುರದಲ್ಲಿ ನಡೆದಿದೆ.

ಇಲ್ಲಿನ ಟಾಟಾನಗರ ರೈಲು ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ತಾಯಿ ಯೊಂದಿಗೆ ಮಲಗಿದ್ದ ಮೂರು ವರ್ಷದ ಬಾಲಕಿಯನ್ನು ಇಬ್ಬರು ಅಪಹರಿಸಿ, ಅತ್ಯಾಚಾರ ಎಸಗಿ ನಂತರ ಕೊಲೆ ಮಾಡಿದ್ದಾರೆ. ಬಾಲಕಿಯ ರುಂಡ–ಮುಂಡ ಬೇರ್ಪಟ್ಟಿದ್ದು, ಬಾಲಕಿಯ ಮುಂಡವಿದ್ದ ಪ್ಲಾಸ್ಟಿಕ್ ಚೀಲ ರೈಲು ನಿಲ್ದಾಣದಿಂದ 4 ಕಿ.ಮೀ. ದೂರದ ಪೊದೆಯಲ್ಲಿ ಪತ್ತೆಯಾಗಿದೆ.

ಈ ಕೃತ್ಯ ಶುಕ್ರವಾರ ರಾತ್ರಿ ನಡೆದಿದ್ದು, ಮಂಗಳವಾರ ಬಾಲಕಿಯ ಮೃತದೇಹ ದೊರಕಿದೆ. ಪಶ್ಚಿಮ ಬಂಗಾಳದ ಪುರು ಲಿಯಾ ಜಿಲ್ಲೆಯಿಂದ ಜೆಮ್‌ಶೆಡ್‌ಪುರಕ್ಕೆ ಬಂದಿದ್ದ ತಾಯಿ, ಗಂಡನನ್ನು ತೊರೆದಿದ್ದು, ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪರಪುರುಷನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಕೈಗೊಂಡಿದ್ದಾರೆ.

ರೈಲ್ವೆ ಪ್ಲಾಟ್‌ಫಾರಂನ ಸಿಸಿಟಿವಿ ಪರಿಶೀಲಿಸಿದಾಗ ಇಬ್ಬರು ಆರೋಪಿಗಳ ಚಹರೆ ಪತ್ತೆಯಾಗಿದ್ದು, ಅವರನ್ನು ಬಂಧಿಸಲಾಗಿದೆ. ಆರೋಪಿಗಳು ಅತ್ಯಾಚಾರ ಮತ್ತು ಕೊಲೆ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.