ಬುಧವಾರ, ಜನವರಿ 22, 2020
28 °C

ಜ.8ರಂದು ‘ಭಾರತ್ ಬಂದ್‌’ಗೆ ಕರೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ದೇಶದ 10 ಕಾರ್ಮಿಕ ಸಂಘಟನೆಗಳು ಬುಧವಾರ (ಜ.8) ‘ಭಾರತ್ ಬಂದ್‌’ ನಡೆಸಲು ಕರೆ ನೀಡಿವೆ. ಕೇಂದ್ರದ ಕಾರ್ಮಿಕ ಇಲಾಖೆಯ ಸಚಿವರ ಸಭೆ ಬಳಿಕ ಸಂಘಟನೆಗಳು ಮುಷ್ಕರ ಕೈಗೊಳ್ಳುವ ನಿರ್ಧಾರ ಪ್ರಕಟಿಸಿದವು. 

ಕಾರ್ಮಿಕರನ್ನು ಜೀತದವರಂತೆ ದುಡಿಸಿಕೊಳ್ಳುವ ರೀತಿಯಲ್ಲಿ ಕಾರ್ಮಿಕ ಕಾನೂನುಗಳು ರಚನೆಯಾಗಿವೆ ಎಂದು ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಸ್‌ಇಡಬ್ಲ್ಯುಎ, ಎಐಸಿಸಿಟಿಯು, ಎಲ್‌ಪಿಎಫ್ ಮತ್ತು ಯುಟಿಯುಸಿ ಸಂಘಟನೆಗಳು ಆರೋಪಿಸಿವೆ. 

ನಿರುದ್ಯೋಗ, ಕನಿಷ್ಠ ವೇತನ, 14 ಅಂಶಗಳ ಬೇಡಿಕೆ ಮತ್ತು ಸಾಮಾಜಿಕ ಭದ್ರತೆಯ ಬಗ್ಗೆ ಪದೇ ಪದೇ ಸಂಘಟನೆಗಳು ದನಿ ಎತ್ತಿದ್ದರೂ, ಸಚಿವರು ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂದು ಆರೋಪಿಸಲಾಗಿದೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು