ನುಡಿ–ಕಿಡಿ

ಬುಧವಾರ, ಏಪ್ರಿಲ್ 24, 2019
33 °C

ನುಡಿ–ಕಿಡಿ

Published:
Updated:

ಭ್ರಷ್ಟಾಚಾರದ ಕುರಿತ ಚರ್ಚಾ ಸವಾಲಿಗೆ ನಾನು ಸಿದ್ಧ. ಪ್ರಧಾನಿ ಅವರ ರೇಸ್‌ಕೋರ್ಸ್ ನಿವಾಸ ಸೇರಿ ಯಾವ ಸ್ಥಳದಲ್ಲಾದರೂ ಚರ್ಚೆ ನಡೆಯಲಿ. ಖಚಿತವಾಗಿ ಹೇಳುತ್ತೇನೆ, ಅಂದು ಮೋದಿ ಅವರು ದೇಶದ ಜನರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡುವುದಿಲ್ಲ. ಚರ್ಚೆಯು ‘ದೂದ್‌ ಕ ದೂದ್, ಪಾನಿ ಕ ಪಾನಿ’ ಎಂಬಂತೆ ಇರಲಿದೆ. ‘ಚೌಕೀದಾರ ಕಳ್ಳ’ ಎಂಬುದು ಅಂದು ಎಲ್ಲರಿಗೂ ತಿಳಿಯಲಿದೆ.
-ರಾಹುಲ್ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ

*
ಅಮೇಠಿಗಾಗಿ ಸಮಯ ಮೀಸಲಿಡಲು ರಾಹುಲ್‌ ಗಾಂಧಿಗೆ ಆಗುತ್ತಿಲ್ಲ. ಅಮೇಠಿ ಅಭಿವೃದ್ಧಿ ಸಂಬಂಧ ಪ್ರಸ್ತಾವ ಕಳುಹಿಸುವಂತೆ ಹಲವು ಬಾರಿ ನಾನು ಹೇಳಿದ್ದರೂ, ಅವರು ಒಂದನ್ನೂ ಕಳುಹಿಸಲಿಲ್ಲ. ಸ್ಮೃತಿ ಅವರು ಕಳೆದ ಬಾರಿ ಸೋತಿದ್ದರೂ ಅಭಿವೃದ್ಧಿಗೆ ಯತ್ನಿಸುತ್ತಿದ್ದಾರೆ. ಆದರೆ ಸಂಸದ ರಾಹುಲ್‌ ಅವರಲ್ಲಿ ಇದು ಕಾಣಿಸುತ್ತಿಲ್ಲ.
-ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

*
ನೋಟು ರದ್ದತಿ ಯಶಸ್ವಿಯಾಗಿದ್ದರೆ ಅದರ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಜಿಎಸ್‌ಟಿಯಿಂದ ಜನರಿಗೆ ಅನುಕೂಲವಾಗಿದ್ದರೆ, ಆ ಬಗ್ಗೆ ಏಕೆ ಈಗ ಚಕಾರ ಎತ್ತುತ್ತಿಲ್ಲ. ಅವರು ಏಕೆ ರಾಷ್ಟ್ರೀಯತೆಯ ಬಗ್ಗೆ ಮಾತ್ರ ಮಾತನಾಡುತ್ತಾರೆ? ಬಿಜೆಪಿ ಆಡಳಿತ ವೈಫಲ್ಯ ಕಂಡಿದೆ ಎಂಬುದೇ ಇದರ ಅರ್ಥ.
-ಪವನ್ ಕುಮಾರ್ ಬನ್ಸಾಲ್, ಕಾಂಗ್ರೆಸ್ ಮುಖಂಡ

*
ಮಧ್ಯಪ್ರದೇಶದಲ್ಲಿ ಲೂಟಿ ಮಾಡಿದ ಹಣವನ್ನು ತುಘಲಕ್ ರಸ್ತೆಯ ಮನೆಗೆ ವರ್ಗಾಯಿಸುತ್ತಿರುವ ಗೌರವಾನ್ವಿತ ವ್ಯಕ್ತಿಯ ಹೆಸರನ್ನು ರಾಹುಲ್ ಏಕೆ ಬಹಿರಂಗಪಡಿಸುತ್ತಿಲ್ಲ? ಕಮಲನಾಥ್ ಆಪ್ತನ ಮನೆಯಲ್ಲಿ ₹280 ಕೋಟಿ ಸಿಕ್ಕಿದ್ದರೂ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ? ಈ ಮೌನವೇ ಅವರ ನೈಜಸ್ಥಿತಿಯನ್ನು ಬಹಿರಂಗಪಡಿಸಿದೆ.
-ಸ್ಮೃತಿ ಇರಾನಿ, ಕೇಂದ್ರ ಸಚಿವೆ

*
ಮೋದಿ ದೊಡ್ಡ ನಾಯಕ, ಹೀಗಾಗಿ ತಮ್ಮ ಜೀವನಾಧಾರಿತ ಸಿನಿಮಾ ತಯಾರಿಸುತ್ತಿದ್ದಾರೆ. ನಮೋ ಸೂಟ್‌ಗಳನ್ನು ಮಾರಾಟ ಮಾಡಲು ನಮೋ ಅಂಗಡಿಗಳನ್ನು ಅವರು ತೆರೆದಿದ್ದಾರೆ. ಚುನಾವಣೆ ಮುಗಿದ ಬಳಿಕ ಅದೇ ಅಂಗಡಿಗಳು ನಮೋ ಚಪ್ಪಲಿಗಳನ್ನು ಮಾರಲಿವೆ.
-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !