ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಪ್ರಯಾಣ ದರ ಹೆಚ್ಚಳವಿಲ್ಲ

‘ಟ್ರೇನ್ 18’ ನಿರ್ಮಾಣಕ್ಕೆ ಆದ್ಯತೆ
Last Updated 2 ಜುಲೈ 2019, 6:35 IST
ಅಕ್ಷರ ಗಾತ್ರ

ರೈಲ್ವೆ ಪ್ರಯಾಣಿಕ ಮತ್ತು ಸರಕು ಸಾಗಣೆ ದರದಲ್ಲಿ ಯಾವುದೇ ಹೆಚ್ಚಳ ಮಾಡಲಾಗಿಲ್ಲ. ಕಾವಲು ರಹಿತ ಲೆವೆಲ್ ಕ್ರಾಸಿಂಗ್ ಸಂಪೂರ್ಣ ನಿರ್ಮೂಲನೆ ಮಾಡಲಾಗಿದೆ.

ರೈಲ್ವೆ ಪ್ರಯಾಣಿಕ ಹಾಗೂ ಸರಕು ಸಾಗಣೆ ಬೋಗಿಗಳ ನಿರ್ಮಾಣಕ್ಕಾಗಿ ಈ ಬಜೆಟ್‌ನಲ್ಲಿ ₹6,114.82 ಕೋಟಿ ಮೀಸಲಿರಿಸಲಾಗಿದ್ದು, ಕಳೆದ ಬಾರಿಗೆ ಹೋಲಿಸಿದರೆ ಶೇ 64ರಷ್ಟು ಹೆಚ್ಚು ಅನುದಾನ ನೀಡಲಾಗಿದೆ.

ರೈಲ್ವೆ ಬೋಗಿಗಳನ್ನು ದೇಶೀಯವಾಗಿ ನಿರ್ಮಿಸಿ ರಫ್ತು ಮಾಡುವ ಯೋಜನೆಗೆ ಇದರಿಂದ ಹೆಚ್ಚು ಪ್ರೋತ್ಸಾಹ ದೊರಕುವ ಸಾಧ್ಯತೆ ಇದೆ. ಮೊದಲ ದೇಶಿ ನಿರ್ಮಿತ ಅತಿ ವೇಗದ ‘ಟ್ರೇನ್ 18’ (ವಂದೇ ಭಾರತ ಎಕ್ಸ್‌ಪ್ರೆಸ್) ರೈಲಿನ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿರುವುದರಿಂದ, ಇನ್ನೂ ಆರು ‘ಟ್ರೇನ್‌ 18’ ರೈಲುಗಳ ತಯಾರಿಕೆಗೆ ಯೋಜನೆ ರೂಪಿಸಲಾಗಿದೆ. ಇದರಿಂದ ಮೇಕ್ ಇನ್ ಇಂಡಿಯಾ ಅಡಿಯಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

2021ರವರೆಗೆ ಮತ್ತಷ್ಟು ರೈಲುಗಳ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. 2014ಕ್ಕೆ ಹೋಲಿಸಿದರೆ ಬಂಡವಾಳ ವೆಚ್ಚ ಶೇ 148ರಷ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT