ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನಾವ್ ಸಂತ್ರಸ್ತೆಗೆ ಸಿಆರ್‌ಪಿಎಫ್ ಭದ್ರತೆ, ₹25 ಲಕ್ಷ ಪರಿಹಾರ : ಸುಪ್ರೀಂ ಆದೇಶ

Last Updated 1 ಆಗಸ್ಟ್ 2019, 12:58 IST
ಅಕ್ಷರ ಗಾತ್ರ

ನವದೆಹಲಿ: ಉನ್ನಾವ್ ಅತ್ಯಾಚಾರ ಸಂತ್ರಸ್ತೆಗೆ ಸಂಬಂಧಿಸಿದ ಎಲ್ಲ 5 ಪ್ರಕರಣಗಳನ್ನು ದೆಹಲಿಯ ಸಿಬಿಐ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲು ಸುಪ್ರೀಂಕೋರ್ಟ್ ಆದೇಶಿಸಿದೆ.ರಾಯ್‌ಬರೇಲಿಯಲ್ಲಿ ನಡೆದ ಕಾರು ಅಪಘಾತ ಪ್ರಕರಣವೂ ಇದರಲ್ಲಿ ಸೇರಿದೆ.ಅದೇ ವೇಳೆ ಈ ಪ್ರಕರಣಗಳ ವಿಚಾರಣೆ ನಡೆಸಲಿರುವ ನ್ಯಾಯಮೂರ್ತಿಗಳು ಯಾರು ಎಂದುಆನಂತರ ತಿಳಿಸುವುದಾಗಿಸುಪ್ರೀಂ ಕೋರ್ಟ್ ಗುರುವಾರ ಹೇಳಿದ್ದಾರೆ.

ಕಾರು ಅಪಘಾತ ಪ್ರಕರಣದ ತನಿಖೆಯನ್ನು ಬುಧವಾರದಿಂದ ಏಳು ದಿನಗಳೊಳಗೆ ಪೂರ್ತಿಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.ಆದಾಗ್ಯೂ, ಕೆಲವೊಂದು ಪರಿಸ್ಥಿತಿಯಲ್ಲಿ ತನಿಖೆಯ ಅವಧಿಯನ್ನು ವಿಸ್ತರಿಸಬೇಕಾಗಿ ಬಂದರೆ ಗರಿಷ್ಟ 1 ವಾರದವರೆಗೆ ವಿಸ್ತರಿಸಬಹುದು.ಹೀಗೆ ವಿಸ್ತರಿಸುವುದಾದರೆ ತನಿಖಾಧಿಕಾರಿ ಸುಪ್ರೀಂಕೋರ್ಟ್‌ನ ಅನುಮತಿ ಪಡೆಯಬೇಕು. ಅದರ ದೈನಂದಿನ ವಿಚಾರಣೆ ಪ್ರಕ್ರಿಯೆ45 ದಿನಗಳೊಳಗೆ ನಡೆಯಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

ಏತನ್ಮಧ್ಯೆ, ಸಂತ್ರಸ್ತೆಯನ್ನು ಹೆಚ್ಚಿನ ಮತ್ತು ಉತ್ತಮ ಚಿಕಿತ್ಸೆಗಾಗಿ ಲಖನೌದಿಂದ ಬೇರೆ ಆಸ್ಪತ್ರೆಗೆ ಶಿಫ್ಟ್ ಮಾಡಲು ಬಯಸುವುದಾದರೆ ಈ ಬಗ್ಗೆ ನ್ಯಾಯಾಲಯದ ಗಮನಕ್ಕೆ ತನ್ನಿ ಎಂದು ನ್ಯಾಯಾಧೀಶರು ಸಂತ್ರಸ್ತೆಯ ಕುಟುಂಬದ ಸದಸ್ಯರಲ್ಲಿ ಹೇಳಿದ್ದಾರೆ.

ಸಂತ್ರಸ್ತೆಗೆ ಆಗಸ್ಟ್ 2ನೇ ತಾರೀಖಿನಿಂದ ಮಧ್ಯಂತರ ಪರಿಹಾರವಾಗಿ ₹25 ಲಕ್ಷ ನೀಡಬೇಕು ಎಂದು ಉತ್ತರ ಪ್ರದೇಶ ಸರ್ಕಾರಕ್ಕೆನ್ಯಾಯಾಲಯ ಆದೇಶಿಸಿದೆ.

ಇದರ ಜತೆಗೆ ಸಂತ್ರಸ್ತೆ, ಆಕೆಯ ಕುಟುಂಬದ ಸದಸ್ಯರಿಗೆ, ವಕೀಲ, ಚಿಕ್ಕಪ್ಪ ಮಹೇಶ್ಸಿಂಗ್ ಮತ್ತು ಆವರ ಆಪ್ತ ಸಹಾಯಕರಿಗೆ ಸಿಆರ್‌ಪಿಎಫ್ ಭದ್ರತೆ ನೀಡಲು ಕೋರ್ಟ್ ಆದೇಶಿಸಿದೆ, ಭದ್ರತೆ ನೀಡದೇ ಇದ್ದರೆ ಈ ಬಗ್ಗೆ ನಾಳೆಯೇ ನ್ಯಾಯಾಲಕ್ಕೆ ತಿಳಿಸಬೇಕು ಎಂದಿದೆ.

ಸಂತ್ರಸ್ತೆಯ ಚಿಕ್ಕಪ್ಪ ರಾಯ್‌ಬರೇಲಿ ಜೈಲಿನಲ್ಲಿದ್ದು ಭದ್ರತಾ ದೃಷ್ಟಿಯಿಂದ ಅವರನ್ನು ತಿಹಾರ್ ಜೈಲಿಗೆ ಶಿಫ್ಟ್ ಮಾಡುವುದರ ಮನವಿ ಬಗ್ಗೆ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.

ಆದಾಗ್ಯೂ ಆರೋಪಿಗಳವಕಾಲತ್ತು ಆಲಿಸದೆನ್ಯಾಯಾಲಯ ಆದೇಶ ಹೊರಡಿಸಿದ್ದು, ಈ ಐದು ಪ್ರಕರಣಗಳಲ್ಲಿ ಏನಾದರೂ ಬದಲಾವಣೆ ಮಾಡಬೇಕಿದ್ದರೆ ನ್ಯಾಯಾಲವನ್ನು ಸಂಪರ್ಕಿಸುವಂತೆ ಹೇಳಿದೆ.

ಕುಟುಂಬಕ್ಕೆ ಬೆದರಿಕೆಯೊಡ್ಡಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆಯ ಕುಟುಂಬ ಸಿಜೆಐಗೆ ಪತ್ರ ಬರೆದಿತ್ತು.ಈ ಪತ್ರಬರೆದು ಕೆಲವೇ ದಿನಗಳಲ್ಲಿ ಸಂತ್ರಸ್ತೆಯ ಕಾರು ಅಪಘಾತಕ್ಕೀಡಾಗಿತ್ತು. ಆರೋಪಿಯಿಂದ ಸಂತ್ರಸ್ತೆಯಕುಟುಂಬಕ್ಕೆ ಬೆದರಿಕೆಯೊಡ್ಡಲಾಗಿದೆ ಎಂಬ ದೂರಿನ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ಸ್ವಯಂಪ್ರೇರಿತ ಅರ್ಜಿ ವಿಚಾರಣೆ ನಡೆಸಿದೆ.ಸಂತ್ರಸ್ತೆಯ ಕುಟುಂಬ ನ್ಯಾಯಾಲಯಕ್ಕೆ ಪತ್ರ ಬರೆದಿದ್ದರೂ ಈ ಬಗ್ಗೆ ಎಚ್ಚರಿಕೆ ವಹಿಸಲು ವಿಳಂಬವಾಗಿದ್ದು ಯಾಕೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಉತ್ತರ ಪ್ರದೇಶದ ಶಾಸಕ ಕುಲ್‌ದೀಪ್ ಸೆಂಗಾರ್ ತಾನು ಅಪ್ರಾಪ್ತೆಯಾಗಿದ್ದಾಗ ಅತ್ಯಾಚಾರವೆಸಗಿದ್ದರು ಎಂದು ಸಂತ್ರಸ್ತೆಜೂನ್ 4, 2017ರಂದು ದೂರು ನೀಡಿದ್ದು ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿದೆ. ಜುಲೈ 28ರಂದು ರಾಯ್‌ಬರೇಲಿಯಲ್ಲಿ ಸಂತ್ರಸ್ತೆಯ ಕಾರು ಅಪಘಾತಕ್ಕೀಡಾಗಿದ್ದು ಈ ಅಪಘಾತದಲ್ಲಿ ಆಕೆಯ ಇಬ್ಬರು ಚಿಕ್ಕಮ್ಮಂದಿರು ಸಾವಿಗೀಡಾಗಿದ್ದರು.ಸಂತ್ರಸ್ತೆ ಮತ್ತು ವಕೀಲರು ಇದರಲ್ಲಿ ಗಂಭೀರ ಗಾಯಗೊಂಡಿದ್ದರು.

ಅಪಘಾತದಲ್ಲಿ ತೀವ್ರ ಗಾಯಗೊಂಡ ಸಂತ್ರಸ್ತೆಯ ವಕೀಲ ಕಿಂಗ್ ಜಾರ್ಜ್ಸ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿತಿ ಈಗ ಸುಧಾರಿಸಿದೆ ಎಂದು ಆಸ್ಪತ್ರೆಯ ಮೂಲಗಳು ಬುಧವಾರ ಹೇಳಿವೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT