ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ 2019: ₹ 34.17 ಲಕ್ಷ ಕೋಟಿಗೆ ಲೇಖಾನುದಾನ

Last Updated 1 ಫೆಬ್ರುವರಿ 2019, 20:14 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಹಣಕಾಸು ವರ್ಷದ ಮೊದಲ ನಾಲ್ಕು ತಿಂಗಳ ಕಾಲ ವೆಚ್ಚ ಮಾಡಲು ಕೇಂದ್ರ ಸರ್ಕಾರ ₹ 34.17 ಲಕ್ಷ ಕೋಟಿಗಳ ಲೇಖಾನುದಾನಕ್ಕೆ ಸಂಸತ್ತಿನ ಒಪ್ಪಿಗೆ ಕೇಳಿದೆ.

2019–20ನೆ ಹಣಕಾಸು ವರ್ಷಕ್ಕೆ ಒಟ್ಟು ₹ 97.43 ಲಕ್ಷ ಕೋಟಿ ವೆಚ್ಚ ತಗುಲಿದೆ ಎಂದು ಮಧ್ಯಂತರ ಬಜೆಟ್‌ನಲ್ಲಿ ಅಂದಾಜಿಸಲಾಗಿದೆ.

ನಿಗದಿತ ಅವಧಿಗೆ ವೆಚ್ಚ ಮಾಡಲು ಮುಂಚಿತವಾಗಿಯೇ ಸಂಸತ್ತು ಅನುಮೋದನೆ ನೀಡುವುದಕ್ಕೆ ಲೇಖಾನುದಾನ ಎನ್ನುತ್ತಾರೆ.

ಲೇಖಾನುದಾನ ಕೋರಿದ ₹ 34.17 ಲಕ್ಷ ಕೋಟಿಯಲ್ಲಿ ₹ 65,366 ಕೋಟಿಗಳನ್ನು ಆಹಾರ ಮತ್ತು ಪಡಿತರ ವಿತರಣೆಗೆ ನಿಗದಿಪಡಿಸಲಾಗಿದೆ. ಗ್ರಾಮೀಣಾಭಿವೃದ್ಧಿಗೆ ₹ 20 ಸಾವಿರ ಕೋಟಿ ಮತ್ತು ರಕ್ಷಣಾ ಸೇವೆಗಳಿಗೆ ₹ 37,423 ಕೋಟಿ ನೀಡಲು ಕೋರಲಾಗಿದೆ.

**

*ಗ್ರ್ಯಾಚುಟಿ ತೆರಿಗೆ ವಿನಾಯಿತಿ ಮಿತಿ ₹10 ಲಕ್ಷದಿಂದ ₹30 ಲಕ್ಷಕ್ಕೆ ಹೆಚ್ಚಳ

* ಕಾರ್ಮಿಕರ ಕನಿಷ್ಠ ಪಿಂಚಣಿ ಮಿತಿ ₹1,000ಕ್ಕೆ ಏರಿಕೆ

* ಅಸಂಘಟಿತ ವಲಯದ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು ₹3 ಸಾವಿರ ಪಿಂಚಣಿ

* ಕೆಲಸದ ಸ್ಥಳದಲ್ಲಿ ಉದ್ಯೋಗಿ ಮೃತಪಟ್ಟರೆ ಆತನ ಕುಟುಂಬಕ್ಕೆ ಇಪಿಎಫ್‌ಒ ಮೂಲಕ ₹6 ಲಕ್ಷ ಪರಿಹಾರ

* ಸುಮಾರು 10 ಕೋಟಿ ಕಾರ್ಮಿಕರಿಗೆ ಪ್ರಧಾನಮಂತ್ರಿ ಪಿಂಚಣಿ ಯೋಜನೆ

* ಪ್ರಧಾನ ಮಂತ್ರಿ ಶ್ರಮ ಯೋಜನೆ ಅಡಿ ಕಾರ್ಮಿಕರಿಗೆ ಮಾಸಿಕ ₹15 ಸಾವಿರ ವರಮಾನ

* ಇಂಧನ ಉಳಿತಾಯಕ್ಕೆ ವಿದ್ಯತ್ ಚಾಲಿತ ವಾಹನ ಬಳಕೆ ಉತ್ತೇಜನಕ್ಕೆ ಕ್ರಮ

* ₹38,572 ಕೋಟಿ– ರಾಷ್ಟ್ರೀಯ ಶಿಕ್ಷಣ ಯೋಜನೆ

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT