ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಬಳಿ ಗನ್ ಇದ್ದರೆ, ನಮ್ಮ ಬಳಿ ಸತ್ಯವಿದೆ: ದಲೈಲಾಮಾ

Last Updated 26 ಡಿಸೆಂಬರ್ 2019, 10:48 IST
ಅಕ್ಷರ ಗಾತ್ರ

ಗಯಾ (ಬಿಹಾರ): ‘ಚೀನಾದ ಕಮ್ಯುನಿಸ್ಟ್‌ ಸರ್ಕಾರದ ಬಳಿ ಬಂದೂಕಿನ ಶಕ್ತಿ ಇದ್ದರೆ, ನಮ್ಮ ಬಳಿ ಸತ್ಯದ ಶಕ್ತಿ ಇದೆ. ಚೀನಾದೊಂದಿಗೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಟಿಬೆಟನ್ ಧಾರ್ಮಿಕ ಗುರು ದಲೈಲಾಮಾ ಬುಧವಾರ ಹೇಳಿದ್ದಾರೆ.

ಬೋಧಗಯಾದ ಮಹಾಬೋಧಿ ದೇವಸ್ಥಾನದಲ್ಲಿ ಮಾತನಾಡಿದ ಅವರು, ‘ಮೂರು ವರ್ಷಗಳ ಹಿಂದೆ ನಡೆಸಿದ್ದ ಸಮೀಕ್ಷೆ ಪ್ರಕಾರ, ಚೀನಾದಲ್ಲಿ ಟಿಬೆಟನ್ ಬೌದ್ಧರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಚೀನಾ ತನ್ನ ಧರ್ಮ ಅತ್ಯಂತ ವೈಜ್ಞಾನಿಕವಾಗಿದೆ ಎಂದು ನಂಬುತ್ತದೆ. ಹಾಗಾಗಿ, ಅದು ಬಂದೂಕಿನ ಶಕ್ತಿ ಹೊಂದಿದೆ. ಆದರೆ, ನಾವು ಸತ್ಯದ ಶಕ್ತಿಯನ್ನು ಹೊಂದಿದ್ದೇವೆ. ಬಂದೂಕಿನ ಶಕ್ತಿಗಿಂತ ಸತ್ಯವೇ ಹೆಚ್ಚು ಶಕ್ತಿಶಾಲಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT