ಗುರುವಾರ , ನವೆಂಬರ್ 14, 2019
23 °C
ಮೊಬೈಲ್‌ನಲ್ಲಿ ಮಾತಿನಿಂದ ಕುತ್ತು

ಮೊಬೈಲ್‌ನಲ್ಲಿ ಮೈಮರೆತ ಮಹಿಳೆ: ಹಾವು ಕಚ್ಚಿ ಸಾವು

Published:
Updated:

ಗೋರಖ್‌ಪುರ್‌, ಉತ್ತರ ಪ್ರದೇಶ : ಮೊಬೈಲ್‌ನಲ್ಲಿ ಮಾತನಾಡುವುದರಲ್ಲಿ ಮೈಮರೆತ ಮಹಿಳೆಯೊಬ್ಬರು, ಪಲ್ಲಂಗದ ಮೇಲಿದ್ದ ಎರಡು ಹಾವುಗಳ ಮೇಲೆ ಕುಳಿತಾಗ, ಹಾವು ಕಚ್ಚಿ ಮೃತಪಟ್ಟಿದ್ದಾರೆ.

ರಿಯಾನ್‌ ಗ್ರಾಮದ ಗೀತಾ ಯಾದವ್‌ (30) ಮೃತಪಟ್ಟವರು.

ಮನೆಯೊಳಗಿನ ಪಲ್ಲಂಗ ಮೇಲೆ ಎರಡು ಹಾವುಗಳು ಮಿಲನ ಕ್ರಿಯೆಯಲ್ಲಿ ತೊಡಗಿದ್ದವು. ಪಲ್ಲಂಗದ ಮೇಲೆ ಬಣ್ಣದ ಬೆಡ್‌ಶೀಟ್‌ ಇದ್ದಿದ್ದರಿಂದ ಹಾವುಗಳು ಇರುವುದು ಗೀತಾ ಅವರಿಗೆ ಕಂಡಿರಲಿಲ್ಲ.

ಥಾಯ್ಲೆಂಡ್‌ನಲ್ಲಿರುವ ಪತಿಯೊಂದಿಗೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.

ಪ್ರತಿಕ್ರಿಯಿಸಿ (+)