ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ನೀಲಿಮಲೆಯಲ್ಲಿ ತಡೆದರು!

7

ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ನೀಲಿಮಲೆಯಲ್ಲಿ ತಡೆದರು!

Published:
Updated:

ಪಂಪಾ: ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದ ಇಬ್ಬರು ಮಹಿಳೆಯರನ್ನು ಪ್ರತಿಭಟನಾಕಾರರು ನೀಲಿಮಲೆಯಲ್ಲಿ ತಡೆದಿದ್ದಾರೆ,  ಪಂಪಾದಿಂದ ಮೇಲೆ ಹತ್ತುತ್ತಿದ್ದಂತೆ ಮಹಿಳೆಯರನ್ನು ನೋಡಿದ 5 ಮಂದಿ ಪ್ರತಿಭಟನಾಕಾರರು ಶರಣಂ ಕೂಗಿ ಈ  ಮಹಿಳೆಯರಿಗೆ ತಡೆಯೊಡ್ಡಿದ್ದಾರೆ.

ಈ ಹಿಂದೆ ಶಬರಿಮಲೆ ಪ್ರವೇಶಿಸಲು ಯತ್ನಿಸಿ ವಿಫಲವಾಗಿದ್ದ  ರೇಶ್ಮಾ ವಿಶಾಂತ್ ಮತ್ತು ಶಾನಿಲಾ ಸಜೀಶ್ ಎಂಬ ಮಹಿಳೆಯರು ಬುಧವಾರ ಮುಂಜಾನೆ ಶಬರಿಮಲೆ ದೇಗುಲ ಪ್ರವೇಶಿಸಲು ಯತ್ನಿಸಿದ್ದಾರೆ ಎಂದು ಮಾತೃಭೂಮಿ ಪತ್ರಿಕೆ ವರದಿ ಮಾಡಿದೆ.

ಬುಧವಾರ ಮುಂಜಾನೆ ನಾಲ್ಕೂವರೆ ಗಂಟೆಗೆ ಇಬ್ಬರು ಮಹಿಳೆಯರು ಇರುವ ಎಂಟು ಮಂದಿ ಅಯ್ಯಪ್ಪ ಭಕ್ತರು ಪಂಪಾ ದಾಟಿ ನಡೆಯಲು ಆರಂಭಿಸಿದ್ದರು. ನೀಲಿಮಲೆಯ ವಾಟರ್ ಟ್ಯಾಂಕ್ ಬಳಿ ತಲುಪಿದಾಗ 5 ಮಂದಿ ಪ್ರತಿಭಟನಾಕಾರರು ಶರಣಂ ಕೂಗಿ ತಡೆಯೊಡ್ಡಿದ್ದಾರೆ. ಈ ಹೊತ್ತಿಗೆ ಅಲ್ಲಿ ಕೆಲವೇ ಪೊಲೀಸರು ಇದ್ದರೂ ಕ್ಷಣದಲ್ಲಿಯೇ ಹೆಚ್ಚಿನ ಪೊಲೀಸರು ಬಂದು ಮಹಿಳೆಯರಿಗೆ ರಕ್ಷಣೆ ಒದಗಿಸಿದ್ದಾರೆ.  
 

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !